ABOUT US
ಪ್ರಶಸ್ತಿಗಳು
ಕಾಮನ್ವೆಲ್ತ್ ಅಸೋಸಿಯೇಷನ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಶನ್ ಅಂಡ್ ಮ್ಯಾನೇಜ್ಮೆಂಟ್ (2018)
ರೆಮ್ಸ್ ನ ಕೃಷಿ ಸುಧಾರಣೆ ಮಾದರಿಗೆ ಸಾರ್ವಜನಿಕ ಸೇವೆಗಳ ನಿರ್ವಹಣೆಯಲ್ಲಿ ಆವಿಷ್ಕಾರ ಎಂಬ ಶೀರ್ಷಿಕೆ ಅಡಿಯಲ್ಲಿ 2018ನೇ ಸಾಲಿನಲ್ಲಿ ಪ್ರತಿಷ್ಟಿತ ಅಂತರಾಷ್ಟ್ರೀಯ ಸಂಸ್ಥೆ ಕಾಮನ್ ವೆಲ್ತ ಅಸೋಸಿಯೇಷನ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ (ಕ್ಯಾಪಮ್) ನಿಂದ ವಿಶೇಷ ಪುರಸ್ಕಾರ ಪ್ರಮಾಣ ಪತ್ರಕ್ಕೆ ಭಾಜನವಾಗಿದೆ ಹಾಗೂ ಅಂತಿಮ ಸುತ್ತಿನಲ್ಲಿ ಅಂತರರಾಷ್ಟ್ರೀಯ ಆವಿಷ್ಕಾರ ಎಂಬ ಪ್ರಶಸ್ತಿಯನ್ನು ಕೂಡ ರೆಮ್ಸ್ ಸಂಸ್ಥೆ ಗಳಿಸಿದೆ.
ಭಾರತೀಯ ಕೃಷಿ ಉದ್ಯಮ ಪ್ರಶಸ್ತಿ (2018)
ಇಂಡಿಯನ್ ಕೌನ್ಸಿಲ್ ರವರು ಆಯೋಜಿಸಿದ್ದ ‘ಅಗ್ರೋ ವರ್ಡ 2018’ (ಕೃಷಿ ಪ್ರಪಂಚ 2018) ಮೇಳದಲ್ಲಿ ರಾಷ್ಟ್ರೀಯ ಇ-ಮಾರ್ಕೆಟ್ ಸರ್ವಿಸಸ್ ಸಂಸ್ಥೆಗೆ ‘ಪ್ರತಿಷ್ಟಿತ ಭಾರತೀಯ ಕೃಷಿ ವ್ಯವಹಾರ 2018 ‘ ಎಂಬ ಪ್ರಶಸ್ತಿ ದೊರೆತಿದೆ.
ಜೆಮ್ಸ್ ಆಫ್ ಡಿಜಿಟಲ್ ಇಂಡಿಯಾ 2017 ಸಾಲಿನ "ಇ-ಆಡಳಿತ ದಲ್ಲಿ ಅತ್ಯದ್ಬುತ ಸಾಧನೆ" ಪ್ರಶಸ್ತಿ
ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ, ಡಿಜಿಟಲ್ ಇಂಡಿಯಾ ಅಡಿಯಲ್ಲಿ ಜೆಮ್ಸ್ ಆಫ್ ಡಿಜಿಟಲ್ ಇಂಡಿಯಾ 2017 ಸಾಲಿನ "ಇ-ಆಡಳಿತ ದಲ್ಲಿ ಅತ್ಯದ್ಬುತ ಸಾಧನೆ" ಪ್ರಶಸ್ತಿ ಯನ್ನು ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್ (ರೆಮ್ಸ್) ಗೆ ‘ನೀಡಿ ಪುರಸ್ಕರಿಸಲಾಗಿದೆ.
ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯದ(QCI) ಪ್ರತಿಷ್ಠಿತ "ಡಿಎಲ್ ಶಾ ಪ್ಲಾಟಿನಮ್ " ಪ್ರಶಸ್ತಿ (2016)
ರೆಮ್ಸ್ ಸಂಸ್ಥೆಗೆ ಕ್ವಾಲಿಟಿ ಕೌನ್ಸಿ ಲ್ ಆಫ್ ಇಂಡಿಯಾದಿಂದ “125 ಕೋಟಿ ನಾಗರೀಕರ ಗುಣಾಮಟ್ಟಾಭಿವೃದ್ಧಿ” ಶೀರ್ಷಿಕೆಯಡಿ 2016ನೇ ಸಾಲಿನ "ಡಿಎಲ್ ಶಾ – ಪ್ಲಾಟಿನಂ" ಶ್ರೇಷ್ಟ ಪುರಸ್ಕಾರ ಲಭಿಸಿದೆ. ಈ ಪ್ರಶಸ್ತಿಯನ್ನು ಭಾರತ ಸರ್ಕಾರದ ಮಾನ್ಯ ನಾಗರಿಕಯಾನ ಸಚಿವರಾದ ಶ್ರೀ ಜಯಂತ್ ಸಿನ್ಹ್ನಃ ರವರು ನವದೆಹಲಿಯಲ್ಲಿ 20ನೇ ಆಗಸ್ಟ್ 2016ರಂದು ರೆಮ್ಸ್ ನ ಪ್ರಧಾನ ವ್ಯವಸ್ಥಾಪಕರು ಮತ್ತು ಸಿ.ಇ.ಒ ರವರಿಗೆ ಪ್ರಧಾನ ಮಾಡಿದರು.
CAPAM-ಕಾಮನ್ವೆಲ್ತ್ ಅಸೋಸಿಯೇಷನ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಶನ್ ಅಂಡ್ ಮ್ಯಾನೇಜ್ಮೆಂಟ್ (2016)
CAPAM ನ - "ಅಂತರ್ ರಾಷ್ಟ್ರೀಯ ಆವಿಷ್ಕಾರ" 2016ನೇ ಪ್ರಶಸ್ತಿಯಲ್ಲಿನ "Innovation Incubation " ವಿಭಾಗದಲ್ಲಿ ಕೃಷಿ ಸುಧಾರಣೆ ಶ್ರೇಣಿಯ ವ್ಯಾಪ್ತಿಗೆ ಬರುವ ಮಾದರಿ ರೆಮ್ಸ್ ಸಂಸ್ಥೆ , ಸೆಮಿ ಪೈನಲ್ ಸುತ್ತಿನ ಪ್ರಶಸ್ತಿಗೆ ಭಾಜನವಾಗಿದೆ.