ನೋಂದಣಿ
ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ವರ್ತಕರ ನೋಂದಣಿ ಬಗ್ಗೆ ಮಾರ್ಗಸೂಚಿ
- 1. ವರ್ತಕರು (ಟ್ರೇಡರ್) ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಟ್ರೇಡಿಂಗ್ ಮಾಡಲು ವ್ಯಾಪಾರದ ಲೈಸೆನ್ಸ್ ನ್ನು ನಿರ್ದೇಶಕರು/ ಉಪ /ಸಹಾಯಕ ನಿರ್ದೇಶಕರು , ಕೃಷಿ ಮಾರಾಟ ಇಲಾಖೆ ಇವರಿಂದ ಪಡೆಯಬಹುದು.
- 2.ಲೈಸೆನ್ಸ್ ನ್ನು ಕನಿಷ್ಟ ಒಂದು ವರ್ಷದಿಂದ ಗರಿಷ್ಟ 10 ವರ್ಷ ವಾಯಿದೆಗೆ ಪಡೆಯಬಹುದು.
- 3. ಲೈಸೆನ್ಸ್ ನ್ನು ಪಡೆಯಲು ಅವಶ್ಯವಿರುವ ದಾಖಲಾತಿಗಳು:
- a. " ಫಾರಂ 37ಎ“ (FORM37A.pdf) ಜೊತೆಗೆ ಫಾರಂನಲ್ಲಿ ನಮೂದಿಸಿರುವ ಎಲ್ಲ ದಾಖಲಾತಿಗಳು ಅಂದರೆ:
- - *ನೋಂದಣಿಗಾಗಿ (ರೂ.200/- ರಂತೆ ಪ್ರತಿ ವರ್ಷಕ್ಕೆ) ಡಿಮ್ಯಾಂಡ್ ಡ್ರಾಪ್ಟ್
*ಬ್ಯಾಂಕ್ ಗ್ಯಾರಂಟಿ (Bankguarantee.pdf)ಬ್ಯಾಂಕ್ ಗ್ಯಾರಂಟಿ ರೂ.1000/- ಕ್ಕೆ (ರೂ. 100/- ನಾನ್ ಜ್ಯುಡಿಷಿಯಲ್ ಛಾಪಾ ಕಾಗದದಲ್ಲಿ) - - ವರ್ತಕರ ಬ್ಯಾಂಕ್ ವಿವರ: ಬ್ಯಾಂಕಿನ ಹೆಸರು, ಖಾತೆಯ ವಿಧ, ಖಾತೆ ಸಂಖ್ಯೆ, ಶಾಖೆ, ಐ.ಎಫ್.ಎಸ್.ಸಿ. ಕೋಡ್ ವಿವರಗಳನ್ನು ನೀಡತಕ್ಕದ್ದು.
- - ಸ್ವ ಸಹಿಯುಳ್ಳ ಪ್ಯಾನ್ ಕಾರ್ಡ್ ಪ್ರತಿ
- - ಸ್ವ ಸಹಿಯುಳ್ಳ ಜಿ.ಎಸ್.ಟಿ ನೋಂದಣಿ ಪ್ರತಿ
- - ವಿಳಾಸ ಖಾತರಿ ದಾಖಲೆ ಪ್ರತಿ (ದೂರವಾಣಿ ಬಿಲ್ / ವಿದ್ಯುತ್ ಬಿಲ್ ಇತರೆ)
- b. ಫಾರಂ ನಂ. 65 ರಲ್ಲಿ (FORM65.pdf) ಅಂಡರ್ ಟೆಕಿಂಗ್ ಪತ್ರ (ರೂ.100/- ಛಾಪಾ ಕಾಗದದಲ್ಲಿ)
- c. ಅರ್ಜಿದಾರರ ವಿವರ: ಸಂಸ್ಥೆಯ ಮಾಲಿಕತ್ವದ ಪ್ರತಿ, ವೈಯುಕ್ತಿಕ / ಪಾಲುದಾರಿಕೆ / ಸಹಭಾಗಿತ್ವ ಒಪ್ಪಂದ ಪ್ರಮಾಣ ಪತ್ರ, ಇನ್ ಕಾರ್ಫೋರೇಷನ್ ಪ್ರಮಾಣ ಪ್ರತಿ, Memorandum ಆಂಡ್ ಆರ್ಟಿಕಲ್ ಆಫ್ ಅಸೋಸಿಯೆಷನ್ ಪ್ರತಿ.
*ಡಿಡಿ ಮತ್ತು ಬ್ಯಾಂಕ್ ಗ್ಯಾರಂಟಿಯನ್ನು ಸಂಬಂಧಿತ ಜಿಲ್ಲೆಯ ಕೃಷಿ ಮಾರಾಟ ಇಲಾಖೆ, ಉಪ / ಸಹಾಯಕ ನಿರ್ದೇಶಕರ ಹೆಸರಿಗೆ, ಹೊರರಾಜ್ಯಗಳ ಟ್ರೇಡರ್ ಆಗಿದ್ದಲ್ಲಿ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಬೆಂಗಳೂರು ಹೆಸರಿಗೆ ತೆಗೆದುಕೊಳ್ಳತಕ್ಕದ್ದು. - 4. ವರ್ತಕರು ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಂಬಂಧಿತ ಉಪ/ಸಹಾಯಕ ನಿರ್ದೇಶಕರು ಮತ್ತು ಹೊರ ರಾಜ್ಯಗಳ ವರ್ತಕರು ಹೊರರಾಜ್ಯಗಳ ಟ್ರೇಡರ್ ಆಗಿದ್ದಲ್ಲಿ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಬೆಂಗಳೂರು ರವರಿಗೆ ಕಳುಹಿಸುವುದು.
- 5. ಪರಿಶೀಲನೆಯ ನಂತರ, ಅರ್ಹ ಅರ್ಜಿದಾರರಿಗೆ ವರ್ತಕರ (ಟ್ರೇಡರ್) ಲೈಸೆನ್ಸ್ ನ್ನು ನೀಡಲಾಗುತ್ತದೆ.
- 6. ಪರವಾನಿಗೆ ದೊರೆತ ನಂತರ ಈ ವೆಬ್ ಜಾಲದಲ್ಲಿ ನೀಡಿರುವ ನಿರ್ದೇಶನದಂತೆ ದಾಖಲಾತಿಗಳನ್ನು ಅಪ್ ಲೋಡ್ ಮಾಡಿ ತಮ್ಮ ಬಳಕೆದಾರರ ಖಾತೆಯ ಐಡಿ ಮತ್ತು ಪಾಸ್ ವರ್ಡ್ ಅನ್ನು ಪಡೆಯಬಹುದು,
- 7. ಇದರ ತರುವಾಯ ಲಾಗ್ ಪ್ರಕ್ರಿಯೆ ಸಕ್ರಿಯೆಗೊಂಡು ವರ್ತಕರುಗಳು ಟ್ರೇಡಿಂಗ್ ನಲ್ಲಿ ಪಾಲ್ಗೋಳ್ಳಬಹುದು.
- 8. ಅವಶ್ಯವಿರುವ ಆನ್ ಲೈನ್ ಸಹಾಯವನ್ನು ವರ್ತಕರುಗಳು ದೂರವಾಣಿ
(080): 22864866 / (080): 22864833/44 ಅಥವಾ This email address is being protected from spambots. You need JavaScript enabled to view it. ಇ ಮೇಲ್ ಮೂಲಕ ಪಡೆಯಬಹುದಾಗಿದೆ.