
ರೆಮ್ಸ್ ಬಗ್ಗೆ
ಸಂಸ್ಥೆಯ ರಚನೆ
ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆಯ ಸುಧಾರಣೆ ಅನುಷ್ಟಾನಕ್ಕಾಗಿ ರೆಮ್ಸ್ ಒಂದು ದೇಶದಲ್ಲೆ ಮೊದಲ ಜಂಟಿ ಉದ್ದಿಮೆಯಾಗಿದೆ, ನೀಡಿರುವ ಆದೇಶದಂತೆ, ರಾಜ್ಯದ ಮಾರುಕಟ್ಟೆ ಸಮಿತಿಗಳ ಜೊತೆ ನಿಕಟ ಕಾರ್ಯನಿರ್ವಹಣೆ ಮತ್ತು ಹೆಚ್ಚು ಸಾಮರ್ಥ್ಯವನ್ನು ಒದಗಿಸಲು ಹಾಗೂ ಎಲ್ಲಾ ಕೃಷಿ ಮಾರುಕಟ್ಟೆಗಳಲ್ಲಿ ಪ್ರಭಾವಶಾಲಿ ಏಕೀಕೃತ ಮಾರುಕಟ್ಟೆ ವೇದಿಕೆ ನಿರ್ವಹಣೆ, ತ್ವರಿತವಾಗಿ ಕಾರ್ಯನಿರ್ವಹಿಸುವ ಒಂದು ಖಾಸಗಿ ಎಂಟರ್ ಪ್ರೈಸಸ್ ಆಗಿದ್ದು, ಸಾರ್ವಜನಿಕ ಹಿತಸಕ್ತಿಗಳ ನಿಟ್ಟಿನಲ್ಲಿ ನಡೆಯುವುದೇ ಇದರ ಅತೀಮುಖ್ಯ ಉದ್ದೇಶವಾಗಿದೆ.
ಕರ್ನಾಟಕ ಸರ್ಕಾರವು ಸರ್ಕಾರದ ಅಪರ ಕಾರ್ಯದರ್ಶಿಗಳು, ಸಹಕಾರ ಇಲಾಖೆಯವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿದೆ, ಇದು ಕೃಷಿ ಮಾರುಕಟ್ಟೆ ವ್ಯವಸ್ಥೆಯ ಸುಧಾರಣೆಗಾಗಿ ವ್ಯವಸ್ಥೆಗಳನ್ನು ಅನ್ವೇಷಿಸಿ, ಇದಕ್ಕೆ ಬೇಕಾದ ಮಧ್ಯಸ್ಥಿಕೆಗಳನ್ನು ಗುರುತಿಸಿ ಹಾಗೂ ಅಗತ್ಯಸುಧಾರಣೆಗಳನ್ನು ಸೂಚಿಸುತ್ತದೆ.
ಸಮಿತಿಯು ಎಲ್ಲಾ ಭಾಗೀದಾರರ ಜೊತೆ ಚರ್ಚೆಯ ನಂತರ ಹಾಗೂ ರಾಜ್ಯದ ನಿಯಂತ್ರಿತ ಮಾರುಕಟ್ಟೆಗಳ ಭೇಟಿ ಹಾಗೂ ಎನ್ ಸಿ ಡಿ ಇ ಎಕ್ಸ್ ಸ್ಪಾಟ್ ಎಕ್ಸ್ ಚೆಂಜ್ - ಮುಂಬೈ ಯು ರಾಷ್ಟ್ರ ವ್ಯಾಪಿ ವಿದ್ಯುನ್ಮಾನ ವಹಿವಾಟು ಅರ್ಥೈಸಿಕೊಂಡು ಇದರ ವರದಿಯನ್ನು 15.5.2013 ರಲ್ಲಿ ಸರ್ಕಾರಕ್ಕೆ ನೀಡಿದೆ. ಸರ್ಕಾರ ಈ ವರದಿಯನ್ನು ಸಮ್ಮತಿಸಿ ಇದರ ಅನುಷ್ಟಾನಕ್ಕೆ ರಾಜ್ಯದಲ್ಲಿ ಕೃಷಿ ಮಾರಾಟ ನೀತಿಯನ್ನು ಅಳವಡಿಸಿದೆ.
ಈ ಕೃಷಿ ಮಾರಾಟ ನೀತಿಯನ್ನು ಅಳವಡಿಸಲು ಕರ್ನಾಟಕ ಸರ್ಕಾರ ಹಾಗೂ ಎನ್ ಸಿ ಡಿ ಇ ಎಕ್ಸ್ ಸ್ಪಾಟ್ ಎಕ್ಸ್ ಚೆಂಜ್ - ಸಹಭಾಗಿತ್ವದ ತಲಾ 50% ಶೇರ್ ಮೂಲಕ ರೆಮ್ಸ್ ಎಂಬ ಜಂಟಿ ಉದ್ದಿಮೆಯ (ಜೈಯಾಂಟ್ ವೆಂಚರ್) ರಚನೆಯಾಗಿದೆ.
ಲೋಗೊ / ಲಾಂಛನ
ರೆಮ್ಸ್ ಲೋಗೊ ವಿವಿಧ ಬಣ್ಣಗಳನ್ನು ಹೊಂದಿದೆ, ಇದು ಮಾರುಕಟ್ಟೆಗಳ ವಿವಿಧ ಗಾತ್ರಗಳನ್ನು ಸೂಚಿಸುತ್ತದೆ, ಸಂಕೀರ್ಣತೆ ಮತ್ತು ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ಒಂದು ಏಕೀಕೃತ ಮಾರುಕಟ್ಟೆಯನ್ನು ರೂಪಿಸಲು ಆದ್ಯಂತ ಸ್ಥಳ. ಈ ಕಂಪೆನಿಯ ಹೆಸರಿನ ಬಣ್ಣ ಕಂಪೆನಿಯು ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಕೇಂದ್ರಿಕರಿಸಿದೆ ಎನ್ನುವುದನ್ನು ಸೂಚಿಸುತ್ತದೆ.