ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್ ಪ್ರೈ.ಲಿ.(ರೆಮ್ಸ್)ಗೆ ಸ್ವಾಗತ

ರಾಷ್ಟ್ರೀಯ ಇ-ಮಾರ್ಕೆಟ್ ಸರ್ವಿಸಸ್ ಪ್ರೈ.ಲಿ. (ರೆಮ್ಸ್) ಸಂಸ್ಥೆಯು ಕರ್ನಾಟಕ ಸರ್ಕಾರ ಹಾಗೂ ಎನ್ ಸಿ ಡಿ ಇ ಎಕ್ಸ್ ಇ ಮಾರ್ಕೆಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಶೇ 50 ಪಾಲುದಾರಿಕೆಯಲ್ಲಿ ಕೃಷಿ ಉತ್ಪನ್ನ ಮಾರಾಟ ನೀತಿಯ ಪರಿಣಾಮಕಾರಿ ಅಳವಡಿಕೆಗಾಗಿ ಹಾಗೂ ಕೃಷಿ ಮಾರಾಟ ವ್ಯವಸ್ಥೆಯಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಕೃಷಿ ಉತ್ಪನ್ನಕ್ಕೆ ಸಮರ್ಥ ಧಾರಣೆ ಆವಿಷ್ಕಾರ ತರಲು ರೈತರು ಹಾಗೂ ಮಾರುಕಟ್ಟೆ ಭಾಗೀದಾರರಿಗೆ ಅನುಕೂಲ ಕಲ್ಪಿಸಲು ಸ್ಥಾಪಿಸಲ್ಪಟ್ಟಿದೆ.

ಉದ್ದೇಶ

ಕೃಷಿ ಉತ್ಪನ್ನ ಮಾರುಕಟ್ಟೆ ಸುಧಾರಣೆಯೊಂದಿಗೆ ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆ ಹೆಚ್ಚಿಸಿ, ತಂತ್ರಜ್ಞಾನ ಬಳಕೆಯಿಂದ ಸ್ಪರ್ಧಾತ್ಮಕ ಬೆಲೆ ಕಲ್ಪಿಸಲು, ರೈತರು ಮತ್ತು ಮಾರುಕಟ್ಟೆ ಭಾಗೀದಾರರಿಗೆ ಅನುಕೂಲ ಕಲ್ಪಿಸುವುದುದರ ಜೊತೆಗೆ ಮಾರುಕಟ್ಟೆ ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ನಿರಂತರವಾಗಿ ಅಳವಡಿಸಿಕೊಳ್ಳುವ ಉದ್ಧೇಶ ಹೊಂದಿದೆ.

ಮಿಷನ್/ ಗುರಿ

ಕೃಷಿ ಉತ್ಪನ್ನ ಮಾರಾಟ ಪದ್ಧತಿಯಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ತರುವುದರೊಂದಿಗೆ ಸಮರ್ಥ ಬೆಲೆ ಕಂಡುಹಿಡಿಯುವ ಮೂಲಕ ರೈತರು ಮತ್ತು ಇತರೆ ಮಾರುಕಟ್ಟೆ ಭಾಗೀದಾರರಿಗೆ ಲಾಭ ಕಲ್ಪಿಸುವುದು.

ದೃಷ್ಟಿ

ದೇಶದ ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆಯ ಮುಂದಾಳತ್ವವನ್ನು ಹೊಂದುವುದು ಮತ್ತು ಎಲ್ಲ ಮಾರುಕಟ್ಟೆ ಭಾಗೀದಾರರ ಸೌಹಾರ್ದತೆ ಮೂಡಿಸುವ ದೃಷ್ಟಿಯನ್ನು ಹೊಂದಿದೆ.

ಮೌಲ್ಯಗಳು

ಸಮಗ್ರತೆ

ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಖಾಸಗಿ ಉದ್ಯಮದ ಉಪಕ್ರಮಶಕ್ತಿಯನ್ನು ಒಟ್ಟುಗೂಡಿಸುವುದು.

ಎಲ್ಲ ಮಾರುಕಟ್ಟೆ ಭಾಗೀದಾರರ ಮೇಲೆ ಗಮನಹರಿಸುವುದು.

ಗ್ಯಾಲರಿ / ಪ್ರಮುಖ ಫೋಟೋ ಸಂಕಲನ

ರೆಮ್ಸ್ ಬಗ್ಗೆ

ಕಾರ್ಪೊರೇಟ್ ಸ್ಟ್ರಕ್ಚರ್

ಕೃಷಿ ಮಾರುಕಟ್ಟೆಯ ಸುಧಾರಣೆಗಾಗಿ ಸ್ಥಾಪಿತಗೊಂಡಿರುವ ರೆಮ್ಸ್ ಸಂಸ್ಥೆಯು ರಾಷ್ಟ್ರದಲ್ಲೇ ಪ್ರಪ್ರಥಮ ಜಂಟಿ ಸಂಸ್ಥೆಯಾಗಿದೆ. ಮಾರುಕಟ್ಟೆ ಸಮಿತಿಗಳೊಂದಿಗೆ ನಿಕಟ ಸಂಪರ್ಕದೊಂದಿಗೆ ಹಾಗೂ ಸರ್ವತೋಮುಖ ಹಿತಾಸಕ್ತಿಯ ಪ್ರಜ್ಞೆಯೊಂದಿಗೆ ಕಾರ್ಯನಿರ್ವಹಿಸುವ ಈ ಏಕೀಕೃತ ಮಾರುಕಟ್ಟೆ ವೇದಿಕೆಯು ರಾಜ್ಯದ ಎಲ್ಲಾ ಮಾರುಕಟ್ಟೆಗಳ ವಹಿವಾಟಿಗೆ ನೆರವಾಗುವ ಚುರುಕಾದ ಚಟುವಟಿಕೆಗಾಗಿ ಸ್ಥಾಪಿತವಾಗಿರುವ ಒಂದು ಖಾಸಗಿ ಉದ್ಯಮವಾಗಿದೆ.

ಮಂಡಳಿಯ ನಿರ್ದೇಶಕರು

ಅಧ್ಯಕ್ಷರು

ಶ್ರೀಮತಿ ವಂದಿತ ಶರ್ಮ
ಅಧ್ಯಕ್ಷರು, ಕರ್ನಾಟಕ ಸರ್ಕಾರ

ಉಪಾಧ್ಯಕ್ಷರು

ಶ್ರೀ ಆರ್. ರಾಮಶೇಷನ್
ಸಲಹೆಗಾರರು, ಎನ್.ಇ.ಎಂ.ಎಲ್

ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ

ಶ್ರೀ ಮನೋಜ್ ರಾಜನ್
ಅಪರ ಕಾರ್ಯದರ್ಶಿಗಳು, ಸಹಕಾರ ಇಲಾಖೆ, ಕರ್ನಾಟಕ ಸರ್ಕಾರ

ನಿರ್ದೇಶಕರು

ಶ್ರೀ. ಮಂಜುನಾಥ ಪ್ರಸಾದ್ ಎನ್ 
ಕಾರ್ಯದರ್ಶಿಗಳು, ಸಹಕಾರ ಇಲಾಖೆ, ಕರ್ನಾಟಕ ಸರ್ಕಾರ

ನಿರ್ದೇಶಕರು

ಶ್ರೀ. ಗಂಗಾಧರ ಸ್ವಾಮಿ ಜಿ ಎಂ
ನಿರ್ದೇಶಕರು, ಕೃಷಿ ಮಾರಾಟ ಇಲಾಖೆ, ಕರ್ನಾಟಕ ಸರ್ಕಾರ

ನಿರ್ದೇಶಕರು

ಶ್ರೀ ಅರುಣ್ ಬಾಲಕೃಷ್ಣ
ನಿರ್ದೇಶಕರು, ಎನ್.ಇ.ಎಂ.ಎಲ್

ನಾಮನಿರ್ದೇಶಿತ ನಿರ್ದೇಶಕರು

ಶ್ರೀ. ಶೈಲೇಶ್ ಶರದ್ ಕುಮಾರ್ ಚಿತ್ರೆ
ಏನ್ಇಎಂಎಲ್ ಪ್ರತಿನಿಧಿ

ರೆಮ್ಸ್ ಬಗ್ಗೆ

ಸಂಸ್ಥೆಯ ರಚನೆ

ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆಯ ಸುಧಾರಣೆ ಅನುಷ್ಟಾನಕ್ಕಾಗಿ ರೆಮ್ಸ್ ಒಂದು ದೇಶದಲ್ಲೆ ಮೊದಲ ಜಂಟಿ ಉದ್ದಿಮೆಯಾಗಿದೆ, ನೀಡಿರುವ ಆದೇಶದಂತೆ, ರಾಜ್ಯದ ಮಾರುಕಟ್ಟೆ ಸಮಿತಿಗಳ ಜೊತೆ ನಿಕಟ ಕಾರ್ಯನಿರ್ವಹಣೆ ಮತ್ತು ಹೆಚ್ಚು ಸಾಮರ್ಥ್ಯವನ್ನು ಒದಗಿಸಲು ಹಾಗೂ ಎಲ್ಲಾ ಕೃಷಿ ಮಾರುಕಟ್ಟೆಗಳಲ್ಲಿ ಪ್ರಭಾವಶಾಲಿ ಏಕೀಕೃತ ಮಾರುಕಟ್ಟೆ ವೇದಿಕೆ ನಿರ್ವಹಣೆ, ತ್ವರಿತವಾಗಿ ಕಾರ್ಯನಿರ್ವಹಿಸುವ ಒಂದು ಖಾಸಗಿ ಎಂಟರ್ ಪ್ರೈಸಸ್ ಆಗಿದ್ದು, ಸಾರ್ವಜನಿಕ ಹಿತಸಕ್ತಿಗಳ ನಿಟ್ಟಿನಲ್ಲಿ ನಡೆಯುವುದೇ ಇದರ ಅತೀಮುಖ್ಯ ಉದ್ದೇಶವಾಗಿದೆ.

ಕರ್ನಾಟಕ ಸರ್ಕಾರವು ಸರ್ಕಾರದ ಅಪರ ಕಾರ್ಯದರ್ಶಿಗಳು, ಸಹಕಾರ ಇಲಾಖೆಯವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿದೆ, ಇದು ಕೃಷಿ ಮಾರುಕಟ್ಟೆ ವ್ಯವಸ್ಥೆಯ ಸುಧಾರಣೆಗಾಗಿ ವ್ಯವಸ್ಥೆಗಳನ್ನು ಅನ್ವೇಷಿಸಿ, ಇದಕ್ಕೆ ಬೇಕಾದ ಮಧ್ಯಸ್ಥಿಕೆಗಳನ್ನು ಗುರುತಿಸಿ ಹಾಗೂ ಅಗತ್ಯಸುಧಾರಣೆಗಳನ್ನು ಸೂಚಿಸುತ್ತದೆ.

ಸಮಿತಿಯು ಎಲ್ಲಾ ಭಾಗೀದಾರರ ಜೊತೆ ಚರ್ಚೆಯ ನಂತರ ಹಾಗೂ ರಾಜ್ಯದ ನಿಯಂತ್ರಿತ ಮಾರುಕಟ್ಟೆಗಳ ಭೇಟಿ ಹಾಗೂ ಎನ್ ಸಿ ಡಿ ಇ ಎಕ್ಸ್ ಸ್ಪಾಟ್ ಎಕ್ಸ್ ಚೆಂಜ್ - ಮುಂಬೈ ಯು ರಾಷ್ಟ್ರ ವ್ಯಾಪಿ ವಿದ್ಯುನ್ಮಾನ ವಹಿವಾಟು ಅರ್ಥೈಸಿಕೊಂಡು ಇದರ ವರದಿಯನ್ನು 15.5.2013 ರಲ್ಲಿ ಸರ್ಕಾರಕ್ಕೆ ನೀಡಿದೆ. ಸರ್ಕಾರ ಈ ವರದಿಯನ್ನು ಸಮ್ಮತಿಸಿ ಇದರ ಅನುಷ್ಟಾನಕ್ಕೆ ರಾಜ್ಯದಲ್ಲಿ ಕೃಷಿ ಮಾರಾಟ ನೀತಿಯನ್ನು ಅಳವಡಿಸಿದೆ.

ಈ ಕೃಷಿ ಮಾರಾಟ ನೀತಿಯನ್ನು ಅಳವಡಿಸಲು ಕರ್ನಾಟಕ ಸರ್ಕಾರ ಹಾಗೂ ಎನ್ ಸಿ ಡಿ ಇ ಎಕ್ಸ್ ಸ್ಪಾಟ್ ಎಕ್ಸ್ ಚೆಂಜ್ - ಸಹಭಾಗಿತ್ವದ ತಲಾ 50% ಶೇರ್ ಮೂಲಕ ರೆಮ್ಸ್ ಎಂಬ ಜಂಟಿ ಉದ್ದಿಮೆಯ (ಜೈಯಾಂಟ್ ವೆಂಚರ್) ರಚನೆಯಾಗಿದೆ.

ಲೋಗೊ / ಲಾಂಛನ

ರೆಮ್ಸ್ ಲೋಗೊ ವಿವಿಧ ಬಣ್ಣಗಳನ್ನು ಹೊಂದಿದೆ, ಇದು ಮಾರುಕಟ್ಟೆಗಳ ವಿವಿಧ ಗಾತ್ರಗಳನ್ನು ಸೂಚಿಸುತ್ತದೆ, ಸಂಕೀರ್ಣತೆ ಮತ್ತು ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ಒಂದು ಏಕೀಕೃತ ಮಾರುಕಟ್ಟೆಯನ್ನು ರೂಪಿಸಲು ಆದ್ಯಂತ ಸ್ಥಳ. ಈ ಕಂಪೆನಿಯ ಹೆಸರಿನ ಬಣ್ಣ ಕಂಪೆನಿಯು ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಕೇಂದ್ರಿಕರಿಸಿದೆ ಎನ್ನುವುದನ್ನು ಸೂಚಿಸುತ್ತದೆ.

ABOUT US

The logo of ReMS with varying colors, symbolizes markets that are of varying sizes, complexity and location well integrated to form a unified market, be it in the state or the country. The name of the Company in green color represents the focus of the Company on agricultural marketing.

THE ORGANISATION

Government of Karnataka had constituted a committee under the chairmanship of the Additional Secretary to Government, Co-operation Department to explore means to improve the agricultural marketing system, identify the interventions required in the sector and suggest necessary reforms.

Copyright©2016 REMS Pvt.Ltd. All rights reserved