Press
-
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆ (ಅಸ್ಸೆಯಿಂಗ್) ಸೇವೆ - ರೈತ ಬಾಂಧವರ ಉತ್ಪನ್ನಕ್ಕೆ ಉಚಿತ ಗುಣವಿಶ್ಲೇಷಣೆ ಕೊಡುಗೆ
ಬೆಂಗಳೂರು , 2016-10-18
ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿನ ಮಾರಾಟ ವ್ಯವಸ್ಥೆಯಲ್ಲಿ ಕೃಷಿ ಉತ್ಪನ್ನಗಳ ಗುಣವಿಶ್ಲೇಷಣೆ ಕಾರ್ಯವಿಧಾನ ಧಾರಣೆ ನಿರ್ಧರಣೆಯ ಮೇಲೆ ಬಹು ಮುಖ್ಯವಾದ ಪಾತ್ರವಹಿಸುತ್ತದೆ
ಅರಿಷಿಣ, ಕೊಬ್ಬರಿ, ಶೇಂಗಾ, ಹತ್ತಿ ಮತ್ತು ಬೇಳೆಕಾಳುಗಳು ಸೇರಿದಂತೆ ಇತರೆ ಪ್ರಮುಖ ಉತ್ಪನ್ನಗಳ ಕುರಿತು ಗುಣವಿಶ್ಲೇಷಣೆ ಕಾರ್ಯವಿಧಾನ ಹಾಗೂ ಉತ್ಪನ್ನದಲ್ಲಿ ಯಾವೆಲ್ಲ ಅಂಶಗಳು ಇದ್ದರೆ ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ಖರೀದಿದಾರರಿಂದ ಉತ್ಪನ್ನಗಳ ಖರೀದಿಗೆ ಬೇಡಿಕೆ ಹೆಚ್ಚಲಿದೆಯೆಂಬುದು ರೈತರಿಗೆ ಮನವರಿಕೆಯಾಗಿದೆ
Read More.. -
ರೆಮ್ಸ್ ಸಂಸ್ಥೆಗೆ ರಾಷ್ಟ್ರೀಯ ಗೌರವ
ಬೆಂಗಳೂರು , 2016-09-21
ನವದೆಹಲಿಯಲ್ಲಿ 19 - 20 ನೇ ಆಗಸ್ಟ್ 2016 ರಂದು ಭಾರತೀಯ ಗುಣಮಟ್ಟ ಪರಿಷತ್ ನ ಸಮ್ಮೇಳನದಲ್ಲಿ ರಾಷ್ಟ್ರೀಯ ಇ - ಮಾರ್ಕೆಟ್ ಸರ್ವಿಸಸ್ ರಾಷ್ಟ್ರೀಯ ಪ್ರತಿಷ್ಠಿತ " ಡಿಎಲ್ ಶಾ - ಪ್ಲಾಟಿನಂ " ಪ್ರಶಸ್ತಿ ಲಭಿಸಿದೆ.
ರಾಷ್ಟ್ರಕ್ಕೆ ಮಾದರಿಯಾದ ಕರ್ನಾಟಕ ಕೃಷಿ ಉತ್ಪನ್ನ ಆನ್ ಲೈನ್ ವ್ಯವಸ್ಥೆ, ಉತ್ಪನ್ನಗಳ ಗುಣಮಟ್ಟಕ್ಕೆ ಆದ್ಯತೆ ಕಲ್ಪಿಸುತ್ತಿರುವ ರೆಮ್ಸ್ ಸಂಸ್ಥೆಯ ಸೇವೆಗೆ ರಾಷ್ಟ್ರದ ನಾಗರಿಕರಿಗೆ ಗುಣಮಟ್ಟದ ಕೃಷಿ ಉತ್ಪನ್ನ ಕಲ್ಪಿಸಲು ಪೂರಕವಾಗಿ ಕಾರ್ಯ ನಿರ್ವಹಿಸುತ್ತಿರುವ ರೆಮ್ಸ್ ಸಂಸ್ಥೆ ರಾಷ್ಟ್ರದ ಪ್ರತಿಷ್ಠಿತ " ಡಿಎಲ್ ಶಾ
Read More.. -
ಟಿಂಬರ್ ಮಾರಾಟಕ್ಕೂ ಬಂತು ಇ-ಹರಾಜು
ಹುಬ್ಬಳ್ಳಿ , 2016-09-18
ಹುಬ್ಬಳ್ಳಿ : ಎಪಿಎಂಸಿಗಳಲ್ಲಿ ಕೊಬ್ಬರಿ, ಅರಿಸಿನ, ತೊಗರಿ, ಅಡಿಕೆ ಇತ್ಯಾದಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಮಾರಾಟಕ್ಕೆ ಇದ್ದ ಆನ್ ಲೈನ್ ಹರಾಜು ವ್ಯವಸ್ಥೆಯನ್ನು ಈಗ ಮರದ ದಿಮ್ಮಿಗಳ ಮಾರಾಟಕ್ಕೂ ವಿಸ್ತರಿಸಲಾಗಿದೆ.
ಸ್ವಂತಕ್ಕೂ ಖರೀದಿಸಬಹುದು : ಮನೆ ಕಟ್ಟುವವರೂ ತಮಗೆ ಬೇಕಾದ ಮರದ ದಿಮ್ಮಿಗಳನ್ನು ಆನ್ ಲೈನ್ ನಲ್ಲಿ ಖರೀದಿ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Read More.. -
ಕುರಿ, ಮೇಕೆ ಮಾರಾಟಕ್ಕೆ ವೈಜ್ಞಾನಿಕ ಮಾರುಕಟ್ಟೆ
ಬೆಂಗಳೂರು, 2016-08-28
ಕುರಿ ಮತ್ತು ಮೇಕೆ ವ್ಯಾಪಾರದಲ್ಲಿ ಹೈನುಗಾರರಿಗೆ ಆಗುತ್ತಿರುವ ನಷ್ಟ ತಪ್ಪಿಸಿ, ನ್ಯಾಯಯುತ ಬೆಲೆ ಸಿಗುವಂತೆ ಮಾಡಲು ವೈಜ್ಞಾನಿಕ ಮಾರುಕಟ್ಟೆ ಸ್ಥಾಪನೆಗೆ ಸರ್ಕಾರ ಮುಂದಾಗಿದೆ.
ಗ್ರಾಹಕರು ಖರೀದಿಸುವ ಮಾಂಸದ ದರದಲ್ಲಿ ಗರಿಷ್ಠ ಮೊತ್ತ ಹೈನುಗಾರರಿಗೆ ತಲುಪಬೇಕು ಎಂಬ ಆಶಯದಿಂದ ಸ್ಥಾಪಿಸಲಾಗುತ್ತಿರುವ ವೈಜ್ಞಾನಿಕ ಮಾರುಕಟ್ಟೆಗೆ ಸದ್ಯವೇ ಚಾಲನೆ ಸಿಗಲಿದೆ.
Read More.. -
ಬೆಳೆ ಸ್ವಚ್ಛತೆ , ವರ್ಗಿಕರಣ ಮತ್ತು ಗುಣವಿಶ್ಲೇಷಣೆ ಮಾಡುವುದರಿಂದ ಏಕೀಕೃತ ಮಾರುಕಟ್ಟೆಯಲ್ಲಾಗುವ ಲಾಭಗಳು
ಬೆಂಗಳೂರು , 2016-08-23
ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ರೈತರ ಕೃಷಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ಪಡೆಯಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಸಚಿತ್ರವಾಗಿ ವಿವರಿಸುವುದು ಈ ಲೇಖನದ ಉದ್ದೇಶ.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸ್ಥಾಪಿಸಲಾಗುತ್ತಿರುವ ಏಕೀಕೃತ ಮಾರುಕಟ್ಟೆ ವೇದಿಕೆಗಳಲ್ಲಿ ರೈತರ ಅನುಕೂಲಕ್ಕಾಗಿ ಕಲ್ಪಿಸಿರುವ ಗುಣ ವಿಶ್ಲೇಷಣೆ ವ್ಯವಸ್ಥೆಯ ಲಾಭವನ್ನು ರೈತ ಬಾಂಧವರು ಪಡೆದುಕೊಳ್ಳುವುದರೊಂದಿಗೆ ರೈತರ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಯೋಜನೆಯ ಲಾಭ ನಿಮಗಾಗಲ
Read More.. -
ಇ-ಮಾರ್ಕೆಟಿಂಗ್ ಸಂಸ್ಥೆಗೆ ರಾಷ್ಟೀಯ ಪ್ರಶಸ್ತಿಯ ಗರಿ
ಬೆಂಗಳೂರು, 2016-08-23
ರಾಷ್ಟ್ರೀಯ ಇ-ಮಾರ್ಕೆಟಿಂಗ್ ಸಂಸ್ಥೆಗೆ ದೇಶದ ಪ್ರತಿಷ್ಠಿತ 'ಡಿಎಲ್ ಶಾ ಪ್ಲಾಟಿನಂ' ಪ್ರಶಸ್ತಿ ಲಭಿಸಿದೆ.ದಿಲ್ಲಿಯಲ್ಲಿ ಆ.20ರಂದು ಕೊನೆಗೊಂಡ ಎರಡು ದಿನಗಳ ಭಾರತೀಯ ಗುಣಮಟ್ಟ ಪರಿಷತ್ ನ ಸಮೇಳನದಲ್ಲಿ ಸರ್ಕಾರದ ಅಪರ ಕಾರ್ಯದರ್ಶಿ ಮನೋಜ್ ರಾಜನ್ ಪ್ರಶಸ್ತಿ ಸ್ವೀಕರಿಸಿದ್ದರು.
ರೈತರು ತಮ್ಮ ಬೆಳೆಗೆ ಸ್ಪರ್ಧಾತ್ಮಕ ಧಾರಣೆ ಪಡೆದುಕೊಳ್ಳಲು ಇ-ಮಾರ್ಕೆಟಿಂಗ್ ವ್ಯವಸ್ಥೆ ಪೂರಕವಾಗಿದೆ.
Read More.. -
ರಾಜ್ಯದ ಕೃಷಿ ಇ-ಮಾರುಕಟ್ಟೆ ವ್ಯವಸ್ಥೆಗೆ ಕೇಂದ್ರದ ಪ್ರಶಸ್ತಿ
ಬೆಂಗಳೂರು , 2016-08-22
ಕರ್ನಾಟಕದ ಆನ್ ಲೈನ್ ಕೃಷಿ ಮಾರುಕಟ್ಟೆ ವ್ಯವಸ್ಥೆಗೆ ಪ್ರತಿಷ್ಠಿತ ಡಿಎಲ್‍ಶಾ ಪ್ರಶಸ್ತಿ ದೊರಕಿದೆ. ದೆಹಲಿಯಲ್ಲಿ ನಡೆದ 11ನೇ ರಾಷ್ಟೀಯ ಗುಣಮಟ್ಟ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.
ಕರ್ನಾಟಕದಲ್ಲಿರುವ 157 ಪ್ರಮುಖ ಕೃಷಿ ಮಾರುಕಟ್ಟೆಗಳ ಪೈಕಿ 142ರಲ್ಲಿ ಆನ್‍ಲೈನ್ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ದೇಶದಲ್ಲೇ ಮಂಚೂಣಿಯಲ್ಲಿದೆ. ಒಟ್ಟಾರೆ ಆನ್‍ಲೈನ್ ಮಾರುಕಟ್ಟೆಯಲ್ಲಿ 25 ಲಕ್ಷ ಕ್ವಿಂಟಲ್ ಪ್ರಮಾಣದ ವ್ಯಾಪಾರ ವಹಿವಾಟು ನಡೆಸಲಾಗಿದೆ,
Read More.. -
ಆನ್ ಲೈನ್ ವ್ಯವಸ್ಥೆಗೆ ಪ್ರಶಸ್ತಿ
ಬೆಂಗಳೂರು, 2016-08-22
ಕರ್ನಾಟಕದ ಕೃಷಿ ಉತ್ಪನ್ನ ಮಾರಾಟಕ್ಕೆ ಆನ್ ಲೈನ್ ಮಾರುಕಟ್ಟೆ ವ್ಯವಸ್ಥೆ ನಿರ್ವಹಿಸುವ ರೆಮ್ಸ್ ಸಂಸ್ಥೆಗೆ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಪ್ರತಿಷ್ಠಿತ ಡಿ ಎಲ್ ಶಾ-ಪ್ಲಾಟಿನಂ ಪ್ರಶಸ್ತಿ ಲಭಿಸಿದೆ.
ದೆಹೆಲಿಯಲ್ಲಿ ನಡೆದ 11ನೇ ರಾಷ್ಟ್ರೀಯ ಕ್ವಾಲಿಟಿ ಕಾನ್ ಕ್ಲೇವ್ ಸಮಾರಂಭದಲ್ಲಿ ಕೇಂದ್ರ ವಿಮಾನಯಾನ ಖಾತೆ ಸಚಿವ ಜಯಂತ್ ಸಿನ್ಹಾ ಅವರಿಂದ ಕರ್ನಾಟಕ ಸರ್ಕಾರದ ಅಪರ ಕಾರ್ಯದರ್ಶಿ ಮನೋಜ್ ರಾಜನ್ ಅವರು ಪ್ರಶಸ್ತಿ ಸ್ವೀಕರಿಸಿದರು.
Read More.. -
ರಾಜ್ಯಕ್ಕೆ ಪ್ರತಿಷ್ಠಿತ ಡಿ ಎಲ್ ಶಾ ಪ್ರಶಸ್ತಿ
ಬೆಂಗಳೂರು , 2016-08-22
ರಾಜ್ಯದ ಮಾದರಿ ಆನ್ ಲೈನ್ ಮಾರುಕಟ್ಟೆ ಕ್ವಾಲಿಟಿಕೌನ್ಸಿಲ್ ಆಫ್ ಇಂಡಿಯಾದ ಪ್ರತಿಷ್ಠಿತ ಡಿಎಲ್ ಶಾ-ಪ್ಲಾಟಿನಂ ಪ್ರಶಸ್ತಿಯನ್ನು ವಿಮಾನಯಾನ ರಾಜ್ಯ ಖಾತೆ ಸಚಿವ ಜಯಂತ್ ಸಿನ್ಹಾ ಅವರು ಕರ್ನಾಟಕ ಸರ್ಕಾರದ ಅಪರ ಕಾರ್ಯದರ್ಶಿ ಮನೋಜ್ ಅವರಿಗೆ ದೆಹಲಿಯಲ್ಲಿ ನಡೆದ 11ನೇ ರಾಷ್ಟ್ರೀಯ ಕ್ವಾಲಿಟಿ ಕಾನ್ ಕ್ಲೇವ್ ಸಮಾರಂಭದಲ್ಲಿ
ಕೃಷಿ ಉತ್ಪನ್ನ ಕ್ಷೇತ್ರಕ್ಕೆ ಅನುಕೂಲವಾಗುವ ರೀತಿಯಲ್ಲಿ ಆನ್ ಲೈನ್ ವ್ಯಾಪಾರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈವರೆಗೆ 26 ಸಾವಿರ ಕೋಟಿ ರೂಪಾಯಿಗಳ ಆನ್ ಲೈನ್ ವ್ಯಾಪಾರ ವಹಿವಾಟು ನಡೆದಿದೆ. 25 ಸಾವಿರ ರೈತರು ಆನ್ ಲೈನ್ ಮಾರುಕಟ್ಟೆಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ
Read More.. -
ಖಾರ ಮೆಣಸಿನಕಾಯಿಗೆ ಒಳ್ಳೆಯ ದರ
ಬೆಂಗಳೂರು, 2016-08-16
ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯಲ್ಲಿ ಆನ್‌ಲೈನ್ ಟೆಂಡರ್ ಜಾರಿಯಿಂದಾಗಿ ಒಣಮೆಣಸಿನ ಕಾಯಿ ಆವಕ ಹೆಚ್ಚಾಗಿದ್ದರೂ ರೈತರಿಗೆ ಉತ್ತಮ ಬೆಲೆ ದೊರಕಿದೆ.
ಹರಾಜು ಸಭಾಂಗಣದ ಟಿ.ವಿ. ಪರದೆಯ ಮೇಲೆ ಯಾವ ಚೀಲ ಅಥವಾ ಲಾಟ್‌ನ್ನು ಎಷ್ಟು ಗರಿಷ್ಠ ದರಕ್ಕೆ ಖರೀದಿ ಮಾಡಲು ಖರೀದಿದಾರು ಮುಂದೆ ಬಂದಿದ್ದಾರೆಂದು ಪ್ರಕಟಿಸಲಾಗುತ್ತದೆ. ರೈತರು ಅಂದಿನ ದರಕ್ಕೆ ಒಪ್ಪಿಗೆ ಸೂಚಿಸಿದರೆ ರೈತರಿಗೆ ಉತ್ಪನ್ನ ಮಾರಾಟವಾದ ಲೆಕ್ಕ ತೀರುವಳಿ ಪಟ್ಟಿ ನೀಡಲಾಗುತ್ತದೆ.
Read More.. -
"ಒಣ ಮೆಣಸಿನಕಾಯಿ ಕಣಜ " ಬ್ಯಾಡಗಿ ಎಪಿಎಂಸಿಯಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ.
ಬೆಂಗಳೂರು, 2016-07-12
ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ಮುಂಬೈ ಸರ್ಕಾರದ ಕಂದಾಯ ಇಲಾಖೆಯ ಅಧಿಸೂಚನೆ ಅನ್ವಯ 1948 ರಲ್ಲಿ ಸ್ಥಾಪಿಸಲಾಗಿದೆ. ಕಾಲ ಕ್ರಮೇಣ ಕರ್ನಾಟಕ ರಾಜ್ಯ ಏಕೀಕರಣಗೊಂಡ ಬಳಿಕ ಕರ್ನಾಟಕ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ ಶಾಸನ 1966 ಮತ್ತು ನಿಯಮಗಳು 1968ರ ಕಾಯ್ಧೆ ಅಡಿಯಲ್ಲ
ಮಾರುಕಟ್ಟೆಯಲ್ಲಿನ ಎಲ್ಲಾ ವಹಿವಾಟುಗಳನ್ನು ಪಾರದರ್ಶಕತೆ, ದಕ್ಷತೆ ಹಾಗು ಸರಳತೆಯಿಂದ ನಡೆಸಲು ಏಕೀಕೃತ ಮಾರುಕಟ್ಟೆ ವೇದಿಕೆಯನ್ನು ಸ್ಥಾಪಿಸಲಾಗಿದೆ.
Read More.. -
ಕೃಷಿ ಉತ್ಪನ್ನಗಳಿಗೂ ಇ-ಸ್ಪರ್ಶ!
ಬೆಂಗಳೂರು, 2016-04-20
ಮಧ್ಯವರ್ತಿಗಳು ಮತ್ತು ವರ್ತಕರ ಶೋಷಣೆಯಿಂದ ರೈತರನ್ನು ಪಾರು ಮಾಡಲು ಏಕೀಕೃತ ಆನ್ ಲೈನ್ ಮಾರುಕಟ್ಟೆ ಈಗ ದೇಶದಾದ್ಯಂತ ಚಾಲನೆಗೆ ಬಂದಿದೆ. ಇಂಥದೊಂದು ಪ್ರಯತ್ನ ದೇಶದಲ್ಲಿಯೇ ಮೊದಲು ಎಂಬ ಹೆಗ್ಗಳಿಕೆಗೂ ಪಾತ್ರವಾದ ಕರ್ನಾಟಕದ ರೈತಸ್ನೇಹಿ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಗವಿಬ್ಯಾಳಿ ಇಲ್ಲಿ ವಿವರಿಸಿದ್ದಾರೆ.
ಇ-ಟೆಂಡರ್ ನಲ್ಲಿ ನಿರೀಕ್ಷಿತ ಬೆಲೆ ದೊರೆತರೆ ತಮ್ಮ ಉತ್ಪನ್ನಗಳನ್ನೂ ಮಾರಾಟ ಮಾಡಬಹುದು, ಒಪ್ಪಿಗೆಯಾಗದಿದ್ದರೆ ಯಾವ ಮುಲಾಜಿಲ್ಲದೆ ಮಾರಾಟ ನಿರಾಕರಿಸುವ ಹಕ್ಕು ರೈತರಿಗಿದೆ. ಮಧ್ಯವರ್ತಿಗಳ ಹಾವಳಿ ದೂರವಾಗಿ, ಕೃಷಿಕರು ಮತ್ತು ವರ್ತಕರು ನೇರ ಮುಖಾಮುಖಿಯಾಗುತ್ತಾರೆ.
Read More.. -
ಏಕೀಕೃತ ಆನ್ ಲೈನ್ ಕೃಷಿ ಮಾರುಕಟ್ಟೆ ಶುರು
ನವದೆಹಲಿ, 2016-04-15
ರೈತರ ಆದಾಯ ಹೆಚ್ಚಿಸಲು ಕಾರ್ಯತಂತ್ರ - ರೈತರು, ವರ್ತಕರನ್ನು ಬೆಸೆಯಲಿರುವ ಆನ್ ಲೈನ್ ವ್ಯವಸ್ಥೆ.
ರೈತರ ಬೆಳೆಗೆ ನ್ಯಾಯಯುತ ಬೆಲೆ ದೊರಕಿಸುವ ಮೂಲಕ ಅವರ ಆದಾಯವನ್ನು ಹೆಚ್ಚಿಸಲು ಮತ್ತು ಮಧ್ಯವರ್ತಿಗಳನ್ನು ದೂರವಿಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಆನ್ ಲೈನ್ ಕೃಷಿ ಮಾರುಕಟ್ಟೆಗೆ ಕೇಂದ್ರ ಸರಕಾರವು ಗುರುವಾರ ಚಾಲನೆ ನೀಡಿದೆ.
ರೈತರಿಗೆ ಇಲ್ಲಿ ಮಧ್ಯವರ್ತಿಗಳ ಕಾಟ ಇರುವುದಿಲ್ಲ. ಯಾರು ಹೆಚ್ಚಿನ ಬೆಲೆ ಸೂಚಿಸುತ್ತಾರೆಯೋ ಅವರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿದೆ ಹಾಗೂ ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರೆಯಲಿದೆ..
Read More.. -
'ಕರ್ನಾಟಕ ಮಾದರಿ' ಇಂದು ದೇಶಾರ್ಪಣೆ
ಬೆಂಗಳೂರು, 2016-04-14
ಎಪಿಎ೦ಸಿ ಮಾರುಕಟ್ಟೆಗಳಲ್ಲಿ ದಲಾಳರು, ರಿಂಗ್ ಮಾಸ್ಟರ್ ಗಳ ಹಿಡಿತ ತಪ್ಪಿಸಿ, ಕೃಷಿ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆ ಕೊಡಿಸುವಲ್ಲಿ ಯಶಸ್ವಿಯಾಗಿರುವ ಕರ್ನಾಟಕದ ಮಾದರಿ ಗುರುವಾರ ಇಡೀ ದೇಶದ ನಾನಾ ರಾಜ್ಯಗಳಲ್ಲಿ ಜಾರಿಯಾಗಲಿದೆ.
26 ರಾಜ್ಯಗಳ ಸಹಕಾರ ಇಲಾಖೆ, ಕೃಷಿ ಮಾರಾಟ ಇಲಾಖೆ ಅಧಿಕಾರಿಗಳು ಕರ್ನಾಟಕಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದ್ದಾರೆ. ಏತನ್ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶಕ್ಕೆ ಅನ್ವಯಿಸುವಂತೆ ಹೊಸ ಕಾರ್ಯಕ್ರಮ ರೂಪಿಸಿದ್ದು ಇದಕ್ಕೆ ಚಾಲನೆ ನೀಡಲಿದ್ದಾರೆ.
Read More.. -
ರಾಜ್ಯದ ರೈತರಿಗಾಗಿ ಇಡೀ ದೇಶ ಮಾರುಕಟ್ಟೆ
ಬೆಂಗಳೂರು, 2016-04-13
ರಾಜ್ಯದ ಎಪಿಎ೦ಸಿ ಮಾರುಕಟ್ಟೆಗಳಲ್ಲಿ ಜಾರಿಗೆ ತಂದಿರುವ ಏಕೀಕೃತ ಮಾರುಕಟ್ಟೆ ವ್ಯವಸ್ಥೆ ಇದೀಗ ದೇಶಕ್ಕೆ ಮಾದರಿಯಾಗಿದ್ದು, ನ್ಯಾಷನಲ್ ಅಗ್ರಿಕಲ್ಚರಲ್ ಮಾರ್ಕೆಟ್ ಹೆಸರಿನಲ್ಲಿ ರಾಷ್ಟ್ರವ್ಯಾಪ್ತಿ ಅನುಷ್ಟಾನಕ್ಕೆ ಬರುತ್ತಿದೆ.
ಇದರಿಂದಾಗಿ ಮುಂದಿನ ದಿನಗಳಲ್ಲಿ ಕರ್ನಾಟಕದ ಮರುಕಟ್ಟೆಗಳೊ೦ದಿಗೆ ರಾಷ್ಟ್ರದ ಎಲ್ಲ ರಾಜ್ಯಗಳ ಮಾರುಕಟ್ಟೆಗಾಳ ನಡುವೆಯೂ ಸಂಪರ್ಕ ಏರ್ಪಡಲಿದ್ದು, ನಮ್ಮ ರೈತರ ಉತ್ಪನ್ನಗಳಿಗೆ ರಾಷ್ಟ್ರೀಯ ಮಾರುಕಟ್ಟೆ ಲಭ್ಯವಾಗಲಿದೆ.
Read More.. -
ಇನ್ನು ರಾಜ್ಯಾದ್ಯಂತ ಏಕೀಕೃತ ಆನ್ ಲೈನ್ ಕೃಷಿ ಮಾರುಕಟ್ಟೆ
ಬೆಂಗಳೂರು , 2016-04-11
ಇನ್ನು ರೈತರ ಉತ್ಪನ್ನಗಳನ್ನು ರಾಜ್ಯದ ಯಾವ ಮೂಲೆಯಲ್ಲಾದರೂ ಕುಳಿತಲ್ಲಿಂದಲೇ ಖರೀದಿಸಬಹುದು. ಕಾರಣ ರೈತರ ಉತ್ಪನ್ನ ಮಾರಾಟಕ್ಕೆ ಇನ್ನುಮುಂದೆ ರಾಜ್ಯವೇ ಒಂದು ಮಾರುಕಟ್ಟೆಯಾಗಲಿದೆ.
ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಸಹಕಾರ ಇಲಾಖೆ ಮತ್ತು ರೆಮ್ಸ್ ಸಂಸ್ಥೆ ಸಹಯೋಗದಲ್ಲಿ 2014 ರಲ್ಲಿ ೩ ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ರೈತರು ಮಾರುಕಟ್ಟೆಗೆ ಬರುತ್ತಿದ್ದಂತೆ ಆರಂಭದಲ್ಲೇ ಉತ್ಪನ್ನ ವಿವರ ದಾಖಲಿಸಲಾಗುತ್ತದೆ.
Read More.. -
ಏಕೀಕೃತ ಮಾರುಕಟ್ಟೆ ಪ್ರಯೋಗ ದೇಶಕ್ಕೆ ಮಾದರಿ
ಬೆಂಗಳೂರು, 2016-02-08
ಎಪಿಎ೦ಸಿಗಳಲ್ಲಿ ಬೆಲೆ, ತೂಕದಲ್ಲಿ ರೈತರಿಗೆ ಆಗುತ್ತಿದ್ದ ವಂಚನೆ ತಪ್ಪಿಸಿ ನ್ಯಾಯಯುತ ಬೆಲೆ ನೇರವಾಗಿ ಸಿಗುವಂತೆ ಮಾಡಲು ಕರ್ನಾಟಕ ಸರ್ಕಾರ ಆರಂಭಿಸಿದ್ದ ಏಕೀಕೃತ ಮಾರುಕಟ್ಟೆ ಪ್ರಯೋಗ ಇಡೀ ದೇಶಕ್ಕೆ ಮಾದರಿಯಾಗಿದೆ.
ಅಲ್ಲದೇ, ಎಪಿಎ೦ಸಿ ಅಂಗಳದಲ್ಲಿ ಎಲೆಕ್ಟ್ರಾನಿಕ್ಸ್ ತೂಕದ ಮೆಷಿನ್, ಇ-ಟೆಂಡರ್, ಇ-ಆಕ್ಷನ್, ಇ-ಪೇಮೆಂಟ್ ಎಲ್ಲವೂ ಅವತರಿಸಿದವು, ಎಪಿಎ೦ಸಿ ಪ್ರಾಂಗಣಕ್ಕೆ ರೈತರು ಉತ್ಪನ್ನಗಳನ್ನು ತಂದು, ಶೇಖರಿಸಿ ಇಡಲು ಉಪ ಉಗ್ರಾಣಗಳನ್ನು ವ್ಯವಸ್ಥೆ ಮಾಡಲಾಯಿತು.
Read More.. -
ಆನ್ ಲೈನ್ ಕೃಷಿ ಮಾರಾಟ ವ್ಯವಸ್ಥೆ ರೈತಪರ
ಬೆಂಗಳೂರು , 2015-10-21
'ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಜಾರಿಗೆ ತಂದಿರುವ ಆನ್ ಲೈನ್ ಮಾರಾಟ ವ್ಯವಸ್ಥೆ ರೈತ ಪರವಾಗಿದೆ' ಎಂದು ಅಮೇರಿಕಾ ರಾಯಭಾರಿ ಕಚೇರಿಯಲ್ಲಿನ ಕೃಷಿಗೆ ಸಂಭಂದಿಸಿದ ರಾಜತಾಂತ್ರಿಕ ಅಧಿಕಾರಿ ಸ್ಕಾಟ್ ಸಿಂಡ್ಲರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಆನ್ ಲೈನ್ ಮೂಲಕ ಜಾರಿ ಮಾಡಲಾದ ಮಾರುಕಟ್ಟೆ ವ್ಯವಸ್ಥೆ, ವರ್ತಕರಿಗೆ ಏಕರೂಪದ ಏಕೀಕೃತ ಪರವಾನಗಿ ನೀಡಿಕೆ ಕೃಷಿ ಉತ್ಪನ್ನಗಳ ಗುಣ ಪರೀಕ್ಷೆ ಮತ್ತು ವರ್ಗೀಕರಣದ ಬಗ್ಗೆ ಸ್ಕಾಟ್ ಸಿಂಡ್ಲರ್ ಮಾಹಿತಿ ಪಡೆದರು.
Read More.. -
ಕೃಷಿಕರಿಗಾಗಿ ರಾಷ್ಟ್ರ್ರೀಯ ಮಾರುಕಟ್ಟೆ
ಹುಬ್ಬಳ್ಳಿ , 2015-07-11
ಹುಬ್ಬಳ್ಳಿ : ಪ್ರತಿ ಕೃಷಿ ಮಾರುಕಟ್ಟೆಗಳ ಮಧ್ಯೆ ಇ-ವ್ಯಾಪಾರ ನಡೆಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರಕಾರ ಈ ಬಾರಿ ರಾಷ್ಟ್ರ್ರೀಯ ಕೃಷಿ ಮಾರುಕಟ್ಟೆ ರೂಪಿಸಲಿದೆ ಎಂದು ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಹೇಳಿದರು.
ಮಣ್ಣು ಪರೀಕ್ಷೆಗೆ ಕೇಂದ್ರ ಸರಕಾರ ನೀಡುವ ಅನುದಾನದಲ್ಲಿ ರಾಜ್ಯಗಳು ಪ್ರಯೋಗಾಲಯವನ್ನು ನಿರ್ಮಿಸಬೇಕು . ಪ್ರತಿ ಜಮೀನಿನ ಮಣ್ಣು ಪರೀಕ್ಷೆ ಮಾಡಿ ಗುರುತಿನ ಚೀಟಿಯನ್ನು ರೈತರಿಗೆ ನೀಡಬೇಕು. ರಾಸಾಯನಿಕ ಗೊಬ್ಬರಗಳ ಅತಿಯಾದ ಉಪಯೋಗದಿಂದಾಗಿ ಈಗಾಗಲೇ ಹೆಚ್ಚಿನ ಜಮೀನಿನ ಮಣ್ಣು ಬಿತ್ತನೆಗೆ ಯೋಗ್ಯವಾಗಿಲ್ಲವಾದ್ದರಿಂದ, ಮಣ್ಣ
Read More.. -
ರಾಜ್ಯದ ಎಪಿಎಂಸಿ ವಹಿವಾಟು ದೇಶಕ್ಕೇ ಮಾದರಿ
ಹುಬ್ಬಳ್ಳಿ , 2015-07-11
ರಾಷ್ಟ್ರದಲ್ಲೇ ಮಾದರಿ ಎನಿಸಿಕೊಂಡಿರುವ ಎಪಿಎಂಸಿಗಳಲ್ಲಿ ಏಕೀಕೃತ ಇ-ಪೇಮೆಂಟ್ (ವಿದ್ಯುನ್ಮಾನ ಪಾವತಿ)ವ್ಯವಸ್ಥೆಗೆ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ಸಿಂಗ್ ಹುಬ್ಬಳ್ಳಿಯ ಅಮರಗೋಳದ ಜಗಜ್ಯೋತಿ ಬಸವೇಶ್ವರ ಎಪಿಎಂಸಿಯಲ್ಲಿ ಶುಕ್ರವಾರ ಚಾಲನೆ ನೀಡಿದರು. ರಾಜ್ಯದ ಎಪಿಎಂಸಿಗಳಲ್ಲಿ ತೂಕದಲ್ಲಿ ಮೋಸ, ಹಣ ಪಾವತಿಯಲ್ಲಿ ವಿ
ಕೃಷಿ ಉತ್ಪನ್ನವನ್ನು ವರ್ತಕರಿಗೆ ಕಳುಹಿಸುವಾಗ, ವಾಹನದ ಚಾಲಕರಿಗೆ ಎಪಿಎಂಸಿಯಿಂದ ಒದಗಿಸಲಾದ ಸ್ಲಿಪ್ ಸಂಖ್ಯೆಯನ್ನು ಕೊಟ್ಟರೆ ಸಾಕು. ವರ್ತಕರು ರೈತರ ಫಸಲನ್ನು ಪಡೆದುಕೊಂಡು ದಾಸ್ತಾನು ಮಾಡಿಕೊಳ್ಳುತ್ತಾರೆ. ಟೆಂಡರ್ ಸಮಯದಲ್ಲಿ ದರದ ಮಾಹಿತಿಯನ್ನು ರೈತರ ಮೊಬೈಲ್‌ಗೆ ಕಳುಹಿಸಿ ಒಪ್ಪಿಗೆಯನ್ನು ಪಡೆದ ನಂತರ ಕೃಷಿ ಉತ
Read More.. -
ಹುಬ್ಬಳ್ಳಿಯಲ್ಲಿ ಏಕೀಕೃತ ಕೃಷಿ ಮಾರುಕಟ್ಟೆ ಬಗ್ಗೆ ರಾಷ್ಟ್ರಮಟ್ಟದ ಕಾರ್ಯಾಗಾರ
ಹುಬ್ಬಳ್ಳಿ , 2015-07-09
ಹುಬ್ಬಳ್ಳಿ : ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಏಕೀಕೃತ ಕೃಷಿ ಮಾರುಕಟ್ಟೆಗಳು "ಕರ್ನಾಟಕ ಮಾದರಿ" ರಾಷ್ಟ್ರಮಟ್ಟದ ಕಾರ್ಯಾಗಾರ ಆರಂಭವಾಗಿದೆ.
ಈ ಕಾಯಾಗಾರದಲ್ಲಿ ಕೇಂದ್ರದ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಸೇರಿದಂತೆ 11 ರಾಜ್ಯಗಳ ಸಚಿವರು, 23 ರಾಜ್ಯಗಳ ಕೃಷಿ ಇಲಾಖೆ ಅಧಿಕಾರಿಗಳು , ಮೂರು ಕೇಂದ್ರಾಡಳಿತ ಪ್ರದೇಶಗಳ ಕಾರ್ಯದರ್ಶಿಗಳು , ರಾಜ್ಯ ಕೃಷಿ ಸಚಿವ ಕೃಷ್ಣ ಬೈರೇಗೌಡ, ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ , ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್
Read More.. -
ಎಪಿಎ೦ಸಿಯ ಆನ್ ಲೈನ್ ಗೆ ಕೇಂದ್ರ ಪ್ರಶಂಸೆ
ಬೆಂಗಳೂರು, 2015-03-02
ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಯಶಸ್ವಿಯಾಗಿ ಜಾರಿಗೊಳಿಸಿರುವ ಎಪಿಎ೦ಸಿ ಮಾರುಕಟ್ಟೆಯ ಆನ್ ಲೈನ್ ಖರೀದಿ ಪದ್ದತಿಯನ್ನು ಕೇಂದ್ರ ಸರ್ಕಾರ ಕರ್ನಾಟಕ ಮಾಡೆಲ್ ಎಂದು ಬಣ್ಣಿಸಿದ್ದು. ರಾಷ್ಟ್ರಕ್ಕೆ ಮಾದರಿಯಾದ ಪದ್ಧತಿ ಎಂದು ಪ್ರಶಂಶಿಸಿದೆ.
ಈ ಕುರಿತು ಪ್ರತ್ರಿಕಾ ಹೇಳಿಕೆ ನೀಡಿರುವ ರಾಷ್ಟ್ರೀಯ ಇ-ಮಾರುಕಟ್ಟೆ ಸೇವಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಹಕಾರ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಆರ್.ಮನೋಜ್, "ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ಏಕೀಕೃತ ಮಾರುಕಟ್ಟೆ ವಿಧಾನ ಮತ್ತು ತಂತ್ರಜ್ಞಾನವನ್ನು ಬೇರೆ ರಾಜ್ಯಗಳು ಅಳವಡಿಸಿಕೊಳ್ಳಲು ಉತ್ಸುಕವಾಗಿವೆ"
Read More.. -
ಎಪಿಎಂಸಿ ಆನ್‌ಲೈನ್ ನಿಗಾ ಸಮಿತಿ
ಬೆಂಗಳೂರು, 2015-01-06
ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಆನ್‌ಲೈನ್ ಸೇವೆ ಒದಗಿಸುವ ಕಾರ್ಯಕ್ರಮಕ್ಕೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ ಸಹಕಾರ ಇಲಾಖೆ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಕೃಷಿ ಉತ್ಪನ್ನ ಮಾರುಕಟ್ಟೆ¬ಗಳ ಸುಧಾರಣಾ ಮೇಲ್ವಿಚಾರಣಾ ಸಮಿತಿ ರಚಿಸಿದೆ.
ಮಾರುಕಟ್ಟೆ ವ್ಯಾಪ್ತಿಯ ರೈತರ ನೋಂದಣಿ, ಬ್ಯಾಂಕಿಂಗ್ ಸೌಲಭ್ಯ ಒದಗಿಸುವುದು, ರೈತರು ಮತ್ತು ಮಾರುಕಟ್ಟೆ ದಳ್ಳಾಳಿಗಳಿಗೆ ಆನ್‌ಲೈನ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡುವ ಕೆಲಸ ಕೂಡ ಈ ಸಮಿತಿ ಮಾಡಲಿದೆ ಎಂದು ಅವರು ತಿಳಿಸಿದರು.
Read More.. -
ರಾಜ್ಯದ ರೈತರ ಆದಾಯ ಹೆಚ್ಚಿಸಿದ ಆನ್ ಲೈನ್ ಮಾರುಕಟ್ಟೆ
ಬೆಂಗಳೂರು, 2014-12-05
ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎ೦ಸಿ)ಗಳಲ್ಲಿ ಇ-ಮಾರುಕಟ್ಟೆ ಆರಂಭಿಸಿದ ವಾಲಿಕ ದಲ್ಲಾಳಿಗಳ ಪಾಲಾಗುತ್ತಿದ್ದ ಲಾಭ ರೈತರ ಖಾತೆಗೆ ನೇರವಾಗಿ ಜಮೆ ಆಗತೊಡಗಿದೆ. ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯದಲ್ಲಿ 2014ರ ಫೆಬ್ರುವರಿಯಲ್ಲಿ ಆಯ್ದ ಎಪಿಎ೦ಸಿಗಳಲ್ಲಿ ಆನ್ ಲೈನ್ ವ್ಯಾಪಾರ ಶುರು ಮಾಡಲಾಗಿತ್ತು.
ಆನ್ ಲೈನ್ ವ್ಯಾಪಾರ ಆರಂಭವಾದ ಬಳಿಕ 8000ರೂ.ಗಳಿಂದ ಗರಿಷ್ಠ 17,500ರೂ. ವರೆಗೆ ರೈತರ ಉತ್ಪನ್ನಗಳಿಗೆ ಧಾರಣೆ ದೊರೆತಿದೆ. ಈಗ ಚಾಮರಾಜನಗರದ ಅರಿಶಿನವನ್ನು ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದಾರೆ.
Read More.. -
ಆನ್‌ಲೈನ್ ಕೃಷಿ ಮಾರುಕಟ್ಟೆ ವ್ಯವಸ್ಥೆ ಆಂಧ್ರದಲ್ಲೂ ಜಾರಿ
ಬೆಂಗಳೂರು, 2014-11-12
ರಾಜ್ಯದಲ್ಲಿನ ಕೃಷಿ ಉತ್ಪನ್ನಗಳ ಆನ್‌ಲೈನ್ ಮಾರಾಟ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ರಾಜ್ಯದಲ್ಲೂ ಏಕೀಕೃತ ಮಾರುಕಟ್ಟೆ ವೇದಿಕೆಯನ್ನು ಅನುಷ್ಠಾನಗೊಳಿಸುವುದಾಗಿ ಹೇಳಿದರು.
ತಿಪಟೂರು ಮತ್ತು ಅರಸೀಕೆರೆ ಮಾರುಕಟ್ಟೆಗಳಲ್ಲಿ ಕಳೆದ 9 ತಿಂಗಳಲ್ಲಿ ಆನ್‌ಲೈನ್ ವ್ಯವಸ್ಥೆಯಿಂದ ರೈತರಿಗೆ ಆಗಿರುವ ಅನುಕೂಲಗಳ ಬಗ್ಗೆ ಅವರು ಮಾಹಿತಿ ನೀಡಿದರು. ಪ್ರಾತ್ಯಕ್ಷಿಕೆ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ ಅವರು ಇದು ರೈತರಿಗೆ ಅನುಕೂಲ ಆಗುವ ಯೋಜನೆ. ಖಂಡಿತ ಇದನ್ನು ಆಂಧ್ರಪ್ರದೇಶದಲ್ಲೂ ಜಾರಿ ಮಾಡುತ್ತೇವೆ
Read More.. -
ರೈತರಿಗೆ ಕೃಷಿ ಮಾರಾಟ ನೀತಿ ವರಮಾನ
ಯಾದಗಿರಿ , 2014-04-26
ಕೃಷಿ ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಗುಣಮಟ್ಟದ ಬೆಳೆ ಬೆಳೆಯಲು ಮತ್ತು ಆರ್ಥಿಕವಾಗಿ ಹೆಚ್ಚು ಲಾಭ ತರುವ ಬೆಳೆಗಳಿಗೆ ಪ್ರೋತ್ಸಹ ನೀಡಲು ನೂತನ ಕೃಷಿ ನೀತಿಯಲ್ಲಿ ತಿಳಿಸಲಾಗಿದೆ ಎಂದು ರಾಜ್ಯ ಕೃಷಿ ಮಾರಾಟ ಇಲಾಖೆ ನಿರ್ದೇಶಕ ಎಸ್. ವಸ್ತ್ರದ್ ಹೇಳಿದರು.
ಕೃಷಿ ಮಾರಾಟ ಸುಧಾರಣಾ ಸಮಿತಿ ಅಧ್ಯಕ್ಷ ಆರ್. ಮನೋಜ್ ಮಾತನಾಡಿ, ಕೃಷಿ ಮಾರಾಟ ವ್ಯವಸ್ಥೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸುವುದರ ಮೂಲಕ ಎಲ್ಲಾ ಮಾರಾಟ ಚಟುವಟಿಕೆಗಳಲ್ಲಿ ಪಾರದರ್ಶಕತೆ, ದಕ್ಷತೆ ಹಾಗೂ ಸರಳೀಕರಣವನ್ನು ತರಲು ಸಾಧ್ಯವಾಗುತ್ತದೆ. ವರ್ತಕರಿಗೆ ಏಕೀಕೃತ ಲೈಸೆನ್ಸ್ ನೀಡುವ ವ್ಯವಸ್ಥೆ ಜಾರಿಯಾಗಿದೆ ಎಂದು ತಿ
Read More.. -
ಎಪಿಎಂಸಿ ತಿದ್ದುಪಡಿ ಕಾಯ್ದೆ ಅಂಗೀಕಾರ
ಬೆಂಗಳೂರು, 2014-04-04
ಕೃಷಿಮಾರುಕಟ್ಟೆ ಸಮಿತಿಗಳಲ್ಲಿ ರೈತರು ಕೃಷಿ ಉತ್ಪನ್ನಗಳನ್ನೂ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಲು ಅನುಕೂಲವಾಗುವ ಗ್ರಾಹಕರ ಮಾರಾಟ ಅಂಗಳ ಕಾರ್ಯಕ್ರಮ ಜಾರಿಗೊಳಿಸುವ ಉದ್ದೇಶದಿಂದ ಮಂಡಿಸಿದ ತಿದ್ದುಪಡಿ ವಿದೇಯಕಕ್ಕೆ ಮಂಗಳವಾರ ಸದನ ಅಂಗೀಕಾರ ನೀಡಿತು.
ಎಪಿಎಂಸಿ ವ್ಯವಸ್ಥೆ ಇಂದು ಕೇಂದ್ರೀಕರಣವಾಗಿದೆ. ಏನೇ ಕೆಲಸ ಆಗಬೇಕಾದರೂ ಬೆಂಗಳೂರಿನಲ್ಲಿರುವ ನಿರ್ದೇಶಕರ ಕಚೇರಿಯಿಂದ ಅಪ್ಪಣೆ ಹೋಗಬೇಕು ಎಂದು ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರೆ, ಜೆಡಿಎಸ್ ನ ಬಿ.ಬಿ ನಿಂಗಯ್ಯ ಹಾಗೂ ಕೋನರೆಡ್ಡಿ ಮಾತನಾಡಿ ಹೊಸ ಕಾನೂನಿನಿಂದಪ್ರಾಯೋಜನ ಆಗುವುದಿಲ್ಲಎಂದು ಅಭಿಪ್ರಾಯಪಟ್ಟ
Read More.. -
ಏಕೀಕೃತ ಮಾರುಕಟ್ಟೆ ವ್ಯವಸ್ಥೆಗೆ ಸಿಎಂ ಚಾಲನೆ
ಬೆಂಗಳೂರು , 2014-02-23
ಕೃಷಿ ಉತ್ಪನ್ನಗಳ ಬೆಲೆಯನ್ನು ರೈತರೇ ನಿಗದಿಮಾಡುವ ಏಕೀಕೃತ ಮಾರುಕಟ್ಟೆ ವ್ಯವಸ್ಥೆಗೆ ಮುಖ್ಯ ಮಂತ್ರಿ ಸಿದ್ದ ರಾಮಯ್ಯ ಚಾಲನೆ ನೀಡಿದ್ದಾರೆ .
ರಾಜ್ಯದ ಜನತೆ ಕೃಷಿಯತ್ತ ಹೆಚ್ಚು ಒಲವು ತೋರಬೇಕು. ಕೃಷಿ ಬಿಟ್ಟು ನಗರ ಸೇರುವ ಜನ ಸಂಖ್ಯೆ ಕಡಿಮೆಯಾಗಬೇಕು ಎನ್ನುವುದು ಸರಕಾರದ ಆಶಯವಾಗಿದೆ.
Read More.. -
ಕೃಷಿ ಉತ್ಪನ್ನಗಳ ಬೆಲೆಗಾಗಿ ಆನ್ ಲೈನ್ ಮಾರುಕಟ್ಟೆ ವಿಸ್ತರಣೆ :ಸಿಎಂ
ಬೆಂಗಳೂರು, 2014-02-23
ರೈತರು ಬೆಳೆದ ಬೆಳೆಗೆ ನ್ಯಾಯಯುತ ಹಾಗೂ ಸ್ಪರ್ಧಾತ್ಮಕ ದರ ದೊರಕಿಸುವ ಉದ್ದೇಶದಿಂದ ರಾಜ್ಯದ ಮೂರು ಎಪಿಮ್ ಸಿಗಳಲ್ಲಿ ಆರಂಭಿಸಿರುವ ಆನ್ ಲೈನ್ ಮಾರುಕಟ್ಟೆ ವ್ಯವಸ್ಥೆಯನ್ನು ರಾಜ್ಯಾದಂತ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಈ ವ್ಯವಸ್ಥೆಯಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದ ನಂತರ ತಮ್ಮ ಹೆಸರು, ಉತ್ಪನ್ನದ ಹೆಸರು,ಪ್ರಮಾಣ,ವಿಳಾಸ,ಮೊಬೈಲ್ ಸಂಖ್ಯೆಯನ್ನು ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ನೀಡಬೇಕು. ನಂತರ ವಿಶೇಷ ಸಂಖ್ಯೆಯುಳ್ಳ ಲಾಟ್ ನಂಬರ್ ನೀಡಲಾಗುತ್ತದೆ.
Read More..