ರಾಷ್ಟ್ರೀಯ ಇ-ಮಾರ್ಕೆಟ್ ಸರ್ವೀಸಸ್ ಪ್ರೈ.ಲಿ.(ರೆಮ್ಸ್)ಗೆ ಸ್ವಾಗತ

ರಾಷ್ಟ್ರೀಯ ಇ-ಮಾರ್ಕೆಟ್ ಸರ್ವಿಸಸ್ ಪ್ರೈ.ಲಿ. (ರೆಮ್ಸ್) ಸಂಸ್ಥೆಯು ಕರ್ನಾಟಕ ಸರ್ಕಾರ ಹಾಗೂ ಎನ್ ಸಿ ಡಿ ಇ ಎಕ್ಸ್ ಇ ಮಾರ್ಕೆಟ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಶೇ 50 ಪಾಲುದಾರಿಕೆಯಲ್ಲಿ ಕೃಷಿ ಉತ್ಪನ್ನ ಮಾರಾಟ ನೀತಿಯ ಪರಿಣಾಮಕಾರಿ ಅಳವಡಿಕೆಗಾಗಿ ಹಾಗೂ ಕೃಷಿ ಮಾರಾಟ ವ್ಯವಸ್ಥೆಯಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಕೃಷಿ ಉತ್ಪನ್ನಕ್ಕೆ ಸಮರ್ಥ ಧಾರಣೆ ಆವಿಷ್ಕಾರ ತರಲು ರೈತರು ಹಾಗೂ ಮಾರುಕಟ್ಟೆ ಭಾಗೀದಾರರಿಗೆ ಅನುಕೂಲ ಕಲ್ಪಿಸಲು ಸ್ಥಾಪಿಸಲ್ಪಟ್ಟಿದೆ.

ಉದ್ದೇಶ

ಕೃಷಿ ಉತ್ಪನ್ನ ಮಾರುಕಟ್ಟೆ ಸುಧಾರಣೆಯೊಂದಿಗೆ ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆ ಹೆಚ್ಚಿಸಿ, ತಂತ್ರಜ್ಞಾನ ಬಳಕೆಯಿಂದ ಸ್ಪರ್ಧಾತ್ಮಕ ಬೆಲೆ ಕಲ್ಪಿಸಲು, ರೈತರು ಮತ್ತು ಮಾರುಕಟ್ಟೆ ಭಾಗೀದಾರರಿಗೆ ಅನುಕೂಲ ಕಲ್ಪಿಸುವುದುದರ ಜೊತೆಗೆ ಮಾರುಕಟ್ಟೆ ಅಭಿವೃದ್ಧಿಗೆ ಪೂರಕವಾದ ಅಂಶಗಳನ್ನು ನಿರಂತರವಾಗಿ ಅಳವಡಿಸಿಕೊಳ್ಳುವ ಉದ್ಧೇಶ ಹೊಂದಿದೆ.

ಮಿಷನ್/ ಗುರಿ

ಕೃಷಿ ಉತ್ಪನ್ನ ಮಾರಾಟ ಪದ್ಧತಿಯಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ತರುವುದರೊಂದಿಗೆ ಸಮರ್ಥ ಬೆಲೆ ಕಂಡುಹಿಡಿಯುವ ಮೂಲಕ ರೈತರು ಮತ್ತು ಇತರೆ ಮಾರುಕಟ್ಟೆ ಭಾಗೀದಾರರಿಗೆ ಲಾಭ ಕಲ್ಪಿಸುವುದು.

ದೃಷ್ಟಿ

ದೇಶದ ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆಯ ಮುಂದಾಳತ್ವವನ್ನು ಹೊಂದುವುದು ಮತ್ತು ಎಲ್ಲ ಮಾರುಕಟ್ಟೆ ಭಾಗೀದಾರರ ಸೌಹಾರ್ದತೆ ಮೂಡಿಸುವ ದೃಷ್ಟಿಯನ್ನು ಹೊಂದಿದೆ.

ಮೌಲ್ಯಗಳು

ಸಮಗ್ರತೆ

ಸಾರ್ವಜನಿಕ ಹಿತಾಸಕ್ತಿಯೊಂದಿಗೆ ಖಾಸಗಿ ಉದ್ಯಮದ ಉಪಕ್ರಮಶಕ್ತಿಯನ್ನು ಒಟ್ಟುಗೂಡಿಸುವುದು.

ಎಲ್ಲ ಮಾರುಕಟ್ಟೆ ಭಾಗೀದಾರರ ಮೇಲೆ ಗಮನಹರಿಸುವುದು.

ಗ್ಯಾಲರಿ / ಪ್ರಮುಖ ಫೋಟೋ ಸಂಕಲನ

THE ORGANISATION

Government of Karnataka had constituted a committee under the chairmanship of the Additional Secretary to Government, Co-operation Department to explore means to improve the agricultural marketing system, identify the interventions required in the sector and suggest necessary reforms.

Copyright©2016 REMS Pvt.Ltd. All rights reserved