Press

 • ಟಿಂಬರ್ ಮಾರಾಟಕ್ಕೂ ಬಂತು ಇ-ಹರಾಜು

  ಹುಬ್ಬಳ್ಳಿ , 2016-09-18

  ಹುಬ್ಬಳ್ಳಿ : ಎಪಿಎಂಸಿಗಳಲ್ಲಿ ಕೊಬ್ಬರಿ, ಅರಿಸಿನ, ತೊಗರಿ, ಅಡಿಕೆ ಇತ್ಯಾದಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಮಾರಾಟಕ್ಕೆ ಇದ್ದ ಆನ್ ಲೈನ್ ಹರಾಜು ವ್ಯವಸ್ಥೆಯನ್ನು ಈಗ ಮರದ ದಿಮ್ಮಿಗಳ ಮಾರಾಟಕ್ಕೂ ವಿಸ್ತರಿಸಲಾಗಿದೆ.

  ಸ್ವಂತಕ್ಕೂ ಖರೀದಿಸಬಹುದು : ಮನೆ ಕಟ್ಟುವವರೂ ತಮಗೆ ಬೇಕಾದ ಮರದ ದಿಮ್ಮಿಗಳನ್ನು ಆನ್ ಲೈನ್ ನಲ್ಲಿ ಖರೀದಿ ಮಾಡಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

  Read More..
 • ಬೆಳೆ ಸ್ವಚ್ಛತೆ , ವರ್ಗಿಕರಣ ಮತ್ತು ಗುಣವಿಶ್ಲೇಷಣ ಮಾಡುವುದರಿಂದ ಏಕೀಕೃತ ಮಾರುಕಟ್ಟೆಯಲ್ಲಾಗುವ ಲಾಭಗಳು

  ಬೆಂಗಳೂರು , 2016-08-23

  ಏಕೀಕೃತ ಮಾರುಕಟ್ಟೆ ವೇದಿಕೆಯಲ್ಲಿ ರೈತರ ಕೃಷಿ ಉತ್ಪನ್ನಗಳಿಗೆ ಸ್ಪರ್ಧಾಮಕ ಬೆಲೆ ಪಡೆಯಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಸಚಿತ್ರವಾಗಿ ವಿವರಿಸುವುದು ಈ ಲೇಖನದ ಉದ್ದೇಶ.

  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಸ್ಥಾಪಿಸಲಾಗುತ್ತಿರುವ ಏಕೀಕೃತ ಮಾರುಕಟ್ಟೆ ವೇದಿಕೆಗಳಲ್ಲಿ ರೈತರ ಅನುಕೂಲಕ್ಕಾಗಿ ಕಲ್ಪಿಸಿರುವ ಗುಣ ವಿಶ್ಲೇಷಣೆ ವ್ಯವಸ್ಥೆಯ ಲಾಭವನ್ನು ರೈತ ಬಾಂಧವರು ಪಡೆದುಕೊಳ್ಳುವುದರೊಂದಿಗೆ ರೈತರ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ ಯೋಜನೆಯ ಲಾಭ ನಿಮಗಾಗಲ

  Read More..
 • ರಾಜ್ಯದ ಕೃಷಿ ಇ-ಮಾರುಕಟ್ಟೆ ವ್ಯವಸ್ಥೆಗೆ ಕೇಂದ್ರದ ಪ್ರಶಸ್ತಿ

  ಬೆಂಗಳೂರು , 2016-08-22

  ಕರ್ನಾಟಕದ ಆನ್ ಲೈನ್ ಕೃಷಿ ಮಾರುಕಟ್ಟೆ ವ್ಯವಸ್ಥೆಗೆ ಪ್ರತಿಷ್ಠಿತ ಡಿಎಲ್‍ಶಾ ಪ್ರಶಸ್ತಿ ದೊರಕಿದೆ. ದೆಹಲಿಯಲ್ಲಿ ನಡೆದ 11ನೇ ರಾಷ್ಟೀಯ ಗುಣಮಟ್ಟ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರಧಾನ ಮಾಡಲಾಗಿದೆ.

  ಕರ್ನಾಟಕದಲ್ಲಿರುವ 157 ಪ್ರಮುಖ ಕೃಷಿ ಮಾರುಕಟ್ಟೆಗಳ ಪೈಕಿ 142ರಲ್ಲಿ ಆನ್‍ಲೈನ್ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ದೇಶದಲ್ಲೇ ಮಂಚೂಣಿಯಲ್ಲಿದೆ. ಒಟ್ಟಾರೆ ಆನ್‍ಲೈನ್ ಮಾರುಕಟ್ಟೆಯಲ್ಲಿ 25 ಲಕ್ಷ ಕ್ವಿಂಟಲ್ ಪ್ರಮಾಣದ ವ್ಯಾಪಾರ ಮಾಡಲಾಗಿದ್ದು,

  Read More..
 • "ಒಣ ಮೆಣಸಿನಕಾಯಿ ಕಣಜ " ಬ್ಯಾಡಗಿ ಎಪಿಎಂಸಿಯಲ್ಲಿ ಏಕೀಕೃತ ಮಾರುಕಟ್ಟೆ ವೇದಿಕೆ.

  ಬೆಂಗಳೂರು, 2016-07-12

  ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆ ಮುಂಬೈ ಸರ್ಕಾರದ ಕಂದಾಯ ಇಲಾಖೆಯ ಅಧಿಸೂಚನೆ ಅನ್ವಯ 1948 ರಲ್ಲಿ ಸ್ಥಾಪಿಸಲಾಗಿದೆ. ಕಾಲ ಕ್ರಮೇಣ ಕರ್ನಾಟಕ ರಾಜ್ಯ ಏಕೀಕರಣಗೊಂಡ ಬಳಿಕ ಕರ್ನಾಟಕ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ನಿಯಂತ್ರಣ ಮತ್ತು ಅಭಿವೃದ್ಧಿ ಶಾಸನ 1966 ಮತ್ತು ನಿಯಮಗಳು 1968ರ ಕಾಯ್ಧೆ ಅಡಿಯಲ್ಲ

  ಮಾರುಕಟ್ಟೆಯಲ್ಲಿನ ಎಲ್ಲಾ ವಹಿವಾಟುಗಳನ್ನು ಪಾರದರ್ಶಕತೆ, ದಕ್ಷತೆ ಹಾಗು ಸರಳತೆಯಿಂದ ನಡೆಸಲು ಏಕೀಕೃತ ಮಾರುಕಟ್ಟೆ ವೇದಿಕೆಯನ್ನು ಸ್ಥಾಪಿಸಲಾಗಿದೆ.

  Read More..
 • ಕೃಷಿ ಉತ್ಪನ್ನಗಳಿಗೂ ಇ-ಸ್ಪರ್ಶ!

  ಬೆಂಗಳೂರು, 2016-04-20

  ಮಧ್ಯವರ್ತಿಗಳು ಮತ್ತು ವರ್ತಕರ ಶೋಷಣೆಯಿಂದ ರೈತರನ್ನು ಪಾರು ಮಾಡಲು ಏಕೀಕೃತ ಆನ್ ಲೈನ್ ಮಾರುಕಟ್ಟೆ ಈಗ ದೇಶದಾದ್ಯಂತ ಚಾಲನೆಗೆ ಬಂದಿದೆ. ಇಂಥದೊಂದು ಪ್ರಯತ್ನ ದೇಶದಲ್ಲಿಯೇ ಮೊದಲು ಎಂಬ ಹೆಗ್ಗಳಿಕೆಗೂ ಪಾತ್ರವಾದ ಕರ್ನಾಟಕದ ರೈತಸ್ನೇಹಿ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಗವಿಬ್ಯಾಳಿ ಇಲ್ಲಿ ವಿವರಿಸಿದ್ದಾರೆ.

  ಇ-ಟೆಂಡರ್ ನಲ್ಲಿ ನಿರೀಕ್ಷಿತ ಬೆಲೆ ದೊರೆತರೆ ತಮ್ಮ ಉತ್ಪನ್ನಗಳನ್ನೂ ಮಾರಾಟ ಮಾಡಬಹುದು, ಒಪ್ಪಿಗೆಯಾಗದಿದ್ದರೆ ಯಾವ ಮುಲಾಜಿಲ್ಲದೆ ಮಾರಾಟ ನಿರಾಕರಿಸುವ ಹಕ್ಕು ರೈತರಿಗಿದೆ. ಮಧ್ಯವರ್ತಿಗಳ ಹಾವಳಿ ದೂರವಾಗಿ, ಕೃಷಿಕರು ಮತ್ತು ವರ್ತಕರು ನೇರ ಮುಖಾಮುಖಿಯಾಗುತ್ತಾರೆ.

  Read More..
 • ಏಕೀಕೃತ ಆನ್ ಲೈನ್ ಕೃಷಿ ಮಾರುಕಟ್ಟೆ ಶುರು

  ನವದೆಹಲಿ, 2016-04-15

  ರೈತರ ಆದಾಯ ಹೆಚ್ಚಿಸಲು ಕಾರ್ಯತಂತ್ರ - ರೈತರು, ವರ್ತಕರನ್ನು ಬೆಸೆಯಲಿರುವ ಆನ್ ಲೈನ್ ವ್ಯವಸ್ಥೆ.

  ರೈತರ ಬೆಳೆಗೆ ನ್ಯಾಯಯುತ ಬೆಲೆ ದೊರಕಿಸುವ ಮೂಲಕ ಅವರ ಆದಾಯವನ್ನು ಹೆಚ್ಚಿಸಲು ಮತ್ತು ಮಧ್ಯವರ್ತಿಗಳನ್ನು ದೂರವಿಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಆನ್ ಲೈನ್ ಕೃಷಿ ಮಾರುಕಟ್ಟೆಗೆ ಕೇಂದ್ರ ಸರಕಾರವು ಗುರುವಾರ ಚಾಲನೆ ನೀಡಿದೆ.

  ರೈತರಿಗೆ ಇಲ್ಲಿ ಮಧ್ಯವರ್ತಿಗಳ ಕಾಟ ಇರುವುದಿಲ್ಲ. ಯಾರು ಹೆಚ್ಚಿನ ಬೆಲೆ ಸೂಚಿಸುತ್ತಾರೆಯೋ ಅವರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ. ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರೆಯಲಿದೆ.

  Read More..
 • ಕೃಷಿಕರಿಗಾಗಿ ರಾಷ್ಟ್ರ್ರೀಯ ಮಾರುಕಟ್ಟೆ

  ಹುಬ್ಬಳ್ಳಿ , 2015-07-11

  ಹುಬ್ಬಳ್ಳಿ : ಪ್ರತಿ ಕೃಷಿ ಮಾರುಕಟ್ಟೆಗಳ ಮಧ್ಯೆ ಇ-ವ್ಯಾಪಾರ ನಡೆಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರಕಾರ ಈ ಬಾರಿ ರಾಷ್ಟ್ರ್ರೀಯ ಕೃಷಿ ಮಾರುಕಟ್ಟೆ ರೂಪಿಸಲಿದೆ ಎಂದು ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಹೇಳಿದರು.

  ಮಣ್ಣು ಪರೀಕ್ಷೆಗೆ ಕೇಂದ್ರ ಸರಕಾರ ನೀಡುವ ಅನುದಾನದಲ್ಲಿ ರಾಜ್ಯಗಳು ಪ್ರಯೋಗಾಲಯವನ್ನು ನಿರ್ಮಿಸಬೇಕು . ಪ್ರತಿ ಜಮೀನಿನ ಮಣ್ಣು ಪರೀಕ್ಷೆ ಮಾಡಿ ಗುರುತಿನ ಚೀಟಿಯನ್ನು ರೈತರಿಗೆ ನೀಡಬೇಕು. ರಾಸಾಯನಿಕ ಗೊಬ್ಬರಗಳ ಅತಿಯಾದ ಉಪಯೋಗದಿಂದಾಗಿ ಈಗಾಗಲೇ ಹೆಚ್ಚಿನ ಜಮೀನಿನ ಮಣ್ಣು ಬಿತ್ತನೆಗೆ ಅಯೋಗ್ಯವಾಗಿದ್ದು ,ಮಣ್ಣು

  Read More..
 • ರಾಜ್ಯದ ಎಪಿಎಂಸಿ ವಹಿವಾಟು ದೇಶಕ್ಕೇ ಮಾದರಿ

  ಹುಬ್ಬಳ್ಳಿ , 2015-07-11

  ರಾಷ್ಟ್ರದಲ್ಲೇ ಮಾದರಿ ಎನಿಸಿಕೊಂಡಿರುವ ಎಪಿಎಂಸಿಗಳಲ್ಲಿ ಏಕೀಕೃತ ಇ-ಪೇಮೆಂಟ್‌ (ವಿದ್ಯುನ್ಮಾನ ಪಾವತಿ)ವ್ಯವಸ್ಥೆಗೆ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ಸಿಂಗ್‌ ಹುಬ್ಬಳ್ಳಿಯ ಅಮರಗೋಳದ ಜಗಜ್ಯೋತಿ ಬಸವೇಶ್ವರ ಎಪಿಎಂಸಿಯಲ್ಲಿ ಶುಕ್ರವಾರ ಚಾಲನೆ ನೀಡಿದರು. ರಾಜ್ಯದ ಎಪಿಎಂಸಿಗಳಲ್ಲಿ ತೂಕದಲ್ಲಿ ಮೋಸ, ಹಣ ಪಾವತಿಯಲ್ಲಿ ವಿ

  ಕೃಷಿ ಉತ್ಪನ್ನವನ್ನು ಅಂಗಡಿಗೆ ಕಳುಹಿಸುವಾಗ ವಾಹನದ ಚಾಲಕರಿಗೆ ಎಪಿಎಂಸಿಯಿಂದ ಒದಗಿಸಲಾದ ಸ್ಲಿಪ್‌ ಸಂಖ್ಯೆಯನ್ನು ಕೊಟ್ಟರೆ ಸಾಕು. ಅಂಗಡಿಕಾರರು ರೈತರ ಫಸಲನ್ನು ಪಡೆದುಕೊಂಡು ದಾಸ್ತಾನು ಮಾಡಿಕೊಳ್ಳುತ್ತಾರೆ. ಟೆಂಡರ್‌ ಸಮಯದಲ್ಲಿ ದರದ ಮಾಹಿತಿಯನ್ನು ರೈತರ ಮೊಬೈಲ್‌ಗೆ ಕಳುಹಿಸಿ ಒಪ್ಪಿಗೆಯನ್ನು ಪಡೆದು ಕೃಷಿ ಉತ್ಪನ್

  Read More..
 • ಹುಬ್ಬಳ್ಳಿಯಲ್ಲಿ ಏಕೀಕೃತ ಕೃಷಿ ಮಾರುಕಟ್ಟೆ ಬಗ್ಗೆ ರಾಷ್ಟ್ರಮಟ್ಟದ ಕಾರ್ಯಾಗಾರ

  ಹುಬ್ಬಳ್ಳಿ , 2015-07-09

  ಹುಬ್ಬಳ್ಳಿ : ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಏಕೀಕೃತ ಕೃಷಿ ಮಾರುಕಟ್ಟೆಗಳು "ಕರ್ನಾಟಕ ಮಾದರಿ" ರಾಷ್ಟ್ರಮಟ್ಟದ ಕಾರ್ಯಾಗಾರ ಆರಂಭವಾಗಿದೆ.

  ಈ ಕಾಯಾಗಾರದಲ್ಲಿ ಕೇಂದ್ರದ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಸೇರಿದಂತೆ 11 ರಾಜ್ಯಗಳ ಸಚಿವರು, 23 ರಾಜ್ಯಗಳ ಕೃಷಿ ಇಲಾಖೆ ಅಧಿಕಾರಿಗಳು , ಮೂರು ಕೇಂದ್ರಾಡಳಿತ ಪ್ರದೇಶಗಳ ಕಾರ್ಯದರ್ಶಿಗಳು , ರಾಜ್ಯ ಕೃಷಿ ಸಚಿವ ಕೃಷ್ಣ ಬೈರೇಗೌಡ, ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ , ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್

  Read More..
 • ರೈತರಿಗೆ ಕೃಷಿ ಮಾರಾಟ ನೀತಿ ವರಮಾನ

  ಯಾದಗಿರಿ , 2014-04-26

  ಕೃಷಿ ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಗುಣಮಟ್ಟದ ಬೆಳೆ ಬೆಳೆಯಲು ಮತ್ತು ಆರ್ಥಿಕವಾಗಿ ಹೆಚ್ಚು ಲಾಭ ತರುವ ಬೆಳೆಗಳಿಗೆ ಪ್ರೋತ್ಸಹ ನೀಡಲು ನೂತನ ಕೃಷಿ ನೀತಿಯಲ್ಲಿ ನೀಡಲಾಗಿದೆ ಎಂದು ರಾಜ್ಯ ಕೃಷಿ ಮಾರಾಟ ಇಲಾಖೆ ನಿರ್ದೇಶಕ ಎಸ್. ವಸ್ತ್ರದ್ ಹೇಳಿದರು.

  ಕೃಷಿ ಮಾರಾಟ ಸುಧಾರಣಾ ಸಮಿತಿ ಅಧ್ಯಕ್ಷ ಆರ್. ಮನೋಜ್ ಮಾತನಾಡಿ, ಕೃಷಿ ಮಾರಾಟ ವ್ಯವಸ್ಥೆಯಲ್ಲಿ ತಂತ್ರಜ್ಯಾನವನ್ನು ಅಳವಡಿಸುವುದರ ಮೂಲಕ ಎಲ್ಲಾ ಮಾರಾಟ ಚಟುವಟಿಕೆಗಳಲ್ಲಿ ಪಾರದರ್ಶಕತೆ, ದಕ್ಷತೆ ಹಾಗೂ ಸರಳೀಕರಣವನ್ನು ತರಲು ಸಾಧ್ಯವಾಗುತ್ತದೆ. ವರ್ತಕರಿಗೆ ಏಕೀಕೃತ ಲೈಸೆನ್ಸ್ ನೀಡುವ ವ್ಯವಸ್ಥೆ ಜಾರಿಗೆ

  Read More..
 • ಎಪಿಎಂಸಿ ತಿದ್ದುಪಡಿ ಕಾಯ್ದೆ ಅಂಗೀಕಾರ

  ಬೆಂಗಳೂರು, 2014-04-04

  ಕೃಷಿಮಾರುಕಟ್ಟೆ ಸಮಿತಿಗಳಲ್ಲಿ ರೈತರು ಕೃಷಿ ಉತ್ಪನ್ನಗಳನ್ನೂ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಲು ಅನುಕೂಲವಾಗುವ ಗ್ರಾಹಕರ ಮಾರಾಟ ಅಂಗಳ ಕಾರ್ಯಕ್ರಮ ಜಾರಿಗೊಳಿಸುವ ಉದ್ದೇಶದಿಂದ ಮಂಡಿಸಿದ ತಿದ್ದುಪಡಿ ವಿದೇಯಕಕ್ಕೆ ಮಂಗಳವಾರ ಸದನ ಅಂಗೀಕಾರ ನೀಡಿತು.

  ಎಪಿಎಂಸಿ ವ್ಯವಸ್ಥೆ ಇಂದು ಕೇಂದ್ರೀಕರಣವಾಗಿದೆ. ಏನೇ ಕೆಲಸ ಆಗಬೇಕಾದರೂ ಬೆಂಗಳೂರಿನಲ್ಲಿರುವ ನಿರ್ದೇಶಕರ ಕಚೇರಿಯಿಂದ ಅಪ್ಪಣೆ ಹೋಗಬೇಕು ಎಂದು ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರೆ, ಜೆಡಿಎಸ್ ನ ಬಿ.ಬಿ ನಿಂಗಯ್ಯ ಹಾಗೂ ಕೋನರೆಡ್ಡಿ ಮಾತನಾಡಿ ಹೊಸ ಕಾನೂನಿನಿಂದ ಪ್ರಾಯೋಜನ ಆಗುವುದಿಲ್ಲಎಂದು ಅಭಿಪ್ರಾಯಪಟ್

  Read More..
 • ಏಕೀಕೃತ ಮಾರುಕಟ್ಟೆ ವ್ಯವಸ್ಥೆಗೆ ಸಿಎಂ ಚಾಲನೆ

  ಬೆಂಗಳೂರು , 2014-02-23

  ಕೃಷಿ ಉತ್ಪನ್ನಗಳ ಬೆಲೆಯನ್ನು ರೈತರೇ ನಿಗದಿಮಾಡುವ ಏಕೀಕೃತ ಮಾರುಕಟ್ಟೆ ವ್ಯವಸ್ಥೆಗೆ ಮುಖ್ಯ ಮಂತ್ರಿ ಸಿದ್ದ ರಾಮಯ್ಯ ಚಾಲನೆ ನೀಡಿದ್ದಾರೆ .

  ರಾಜ್ಯದ ಜನತೆ ಕೃಷಿಯತ್ತ ಹೆಚ್ಚು ಒಲವು ತೋರಬೇಕು. ಕೃಷಿ ಬಿಟ್ಟು ನಗರ ಸೇರುವ ಜನ ಸಂಖ್ಯೆ ಕಡಿಮೆಯಾಗಬೇಕು ಎನ್ನುವುದು ಸರಕಾರದ ಆಶಯವಾಗಿದೆ.

  Read More..
 • ಕೃಷಿ ಉತ್ಪನ್ನಗಳ ಬೆಲೆಗಾಗಿ ಆನ್ ಲೈನ್ ಮಾರುಕಟ್ಟೆ ವಿಸ್ತರಣೆ :ಸಿಎಂ

  ಬೆಂಗಳೂರು, 2014-02-23

  ರೈತರು ಬೆಳೆದ ಬೆಳೆಗೆ ನ್ಯಾಯಯುತ ಹಾಗೂ ಸ್ಪರ್ಧಾತ್ಮಕ ದರ ದೊರಕಿಸುವ ಉದ್ದೇಶದಿಂದ ರಾಜ್ಯದ ಮೂರು ಎಪಿಮ್ ಸಿಗಳಲ್ಲಿ ಆರಂಭಿಸಿರುವ ಆನ್ ಲೈನ್ ಮಾರುಕಟ್ಟೆ ವ್ಯವಸ್ಥೆಯನ್ನು ರಾಜ್ಯಾದಂತ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

  ಈ ವ್ಯವಸ್ಥೆಯಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದ ನಂತರ ತಮ್ಮ ಹೆಸರು, ಉತ್ಪನ್ನದ ಹೆಸರು,ಪ್ರಮಾಣ,ವಿಳಾಸ,ಮೊಬೈಲ್ ಸಂಖ್ಯೆಯನ್ನು ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ನೀಡಬೇಕು. ನಂತರ ವಿಶೇಷ ಸಂಖ್ಯೆಯುಳ್ಳ ಲಾಟ್ ನಂಬರ್ ನೀಡಲಾಗುತ್ತದೆ.

  Read More..

THE ORGANISATION

Government of Karnataka had constituted a committee under the chairmanship of the Additional Secretary to Government, Co-operation Department to explore means to improve the agricultural marketing system, identify the interventions required in the sector and suggest necessary reforms.

Copyright©2016 REMS Pvt.Ltd. All rights reserved